Home / ರಾಜಕೀಯ / 170 ಲಕ್ಷ ಕೋಟಿ ಮೀರಿದ ಕೇಂದ್ರದ ಸಾಲ

170 ಲಕ್ಷ ಕೋಟಿ ಮೀರಿದ ಕೇಂದ್ರದ ಸಾಲ

Spread the love

ಕೇಂದ್ರ ಸರ್ಕಾರದ ಒಟ್ಟು ಸಾಲವು 2024ರ ಮಾರ್ಚ್‌ ಅಂತ್ಯದ ವೇಳೆಗೆ ₹171.78 ಲಕ್ಷ ಕೋಟಿಗೆ ಏರಿಕೆಯಾಗಿದೆ. 2023ರ ಡಿಸೆಂಬರ್‌ ಅಂತ್ಯದಿಂದ ಆರಂಭಗೊಂಡು 2024ರ ಮಾರ್ಚ್‌ ಅಂತ್ಯದ ವೇಳೆದ ವೇಳೆ ಶೇ 3.4ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ ಸಾರ್ವಜನಿಕ ಸಾಲದ ನಿರ್ವಹಣಾ ತ್ರೈಮಾಸಿಕ ವರದಿಯಲ್ಲಿ (ಜನವರಿ-ಮಾರ್ಚ್‌, 2024) ಹೇಳಲಾಗಿದೆ

₹166.14 ಲಕ್ಷ ಕೋಟಿ;2023ರ ಡಿಸೆಂಬರ್‌ ಅಂತ್ಯದಲ್ಲಿ ಇದ್ದ ಸಾಲದ ಮೊತ್ತ

₹171.78 ಲಕ್ಷ ಕೋಟಿ;2024ರ ಮಾರ್ಚ್‌ ಅಂತ್ಯದ ವೇಳೆ ಇದ್ದ ಸಾಲದ ಮೊತ್ತ

ಶೇ 3.4: ಏರಿಕೆಯಾದ ಸಾಲದ ಪ್ರಮಾಣ

₹170 ಲಕ್ಷ ಕೋಟಿ ಮೀರಿದ ಕೇಂದ್ರದ ಸಾಲ

₹154.95 ಲಕ್ಷ ಕೋಟಿ (90.2%);ಕೇಂದ್ರ ಸರ್ಕಾರದ ವಿವಿಧ ಸಾಲಗಳ ಮೊತ್ತ

₹16.83 ಲಕ್ಷ ಕೋಟಿ (9.8%);ಸರ್ಕಾರ ವಿತರಿಸಿರುವ ಬಾಂಡ್‌ಗಳ ಬದಲಿಗೆ ನೀಡಬೇಕಿರುವ ಮೊತ್ತ ಮತ್ತು ವಿವಿಧ ಮರುಪಾವತಿಗಳ ಮೊತ್ತ

—-

ವಿತ್ತೀಯ ಕೊರತೆ: ಶೇ 3ರಷ್ಟು

ಈ ಆರ್ಥಿಕ ವರ್ಷದ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿನ ಕೇಂದ್ರ ಬಜೆಟ್‌ನ ವಿತ್ತೀಯ ಕೊರತೆಯು ಶೇ 3ರಷ್ಟಾಗಿದೆ. ಲೋಕಸಭೆ ಚುನಾವಣೆಯ ಕಾರಣ ನೀತಿ ಸಂಹಿತೆ ಜಾರಿಯಲ್ಲಿತ್ತು. ಈ ಕಾರಣದಿಂದಾಗಿ ಸರ್ಕಾರವು ಕಡಿಮೆ ವೆಚ್ಚ ಮಾಡಿದೆ ಎಂದು ಸಿಜಿಎ ಹೇಳಿದೆ. 2023-24ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬಜೆಟ್‌ನ ವಿತ್ತೀಯ ಕೊರತೆಯು ಶೇ 11.8ರಷ್ಟಿತ್ತು.

2023-24ನೇ ಸಾಲಿನಲ್ಲಿ ಬಜೆಟ್‌ನ ವಿತ್ತೀಯ ಕೊರತೆಯು ಶೇ 5.6ರಷ್ಟಿತ್ತು. ಇದು ಶೇ 5.08ರಷ್ಟಾಗಲಿದೆ ಎಂದು ಅಂದಾಜು ಮಾಡಲಾಗಿತ್ತು. 2025-26ನೇ ಸಾಲಿನಲ್ಲಿ ಶೇ 4.5ರಷ್ಟು ವಿತ್ತೀಯ ಕೊರತೆಯು ಸಾಧಿಸಬೇಕು ಎಂಬ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

3%;2024-25ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್‌-ಮೇ ತಿಂಗಳಿನ ವಿತ್ತೀಯ ಕೊರತೆ ಪ್ರಮಾಣ

11.8%;2023-24ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್‌-ಮೇ ತಿಂಗಳಿನ ವಿತ್ತೀಯ ಕೊರತೆ ಪ್ರಮಾಣ


Spread the love

About Laxminews 24x7

Check Also

ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು

Spread the love ಮಹಾಲಿಂಗಪುರ: ರೈತ ಸಮುದಾಯವು ಜಾಣತನದಿಂದ ಒಕ್ಕಲುತನ ಮಾಡಿದರೆ ಕಡಿಮೆ ಜಮೀನು, ಅಲ್ಪಾವಧಿಯಲ್ಲಿಯೇ ಲಾಭವನ್ನು ಮಾಡಿಕೊಳ್ಳಬಹುದು ಎಂಬುದನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ