ಬೆಂಗಳೂರು: ಆಕಸ್ಮಿಕವಾಗಿ ಸೋಪ್ ಮೇಲೆ ಕಾಲಿಟ್ಟು ಮಹಿಳೆಯೊಬ್ಬರು ಕಟ್ಟಡದ ಮೇಲಿಂದ ಬಿದ್ದ ಘಟನೆ ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಕನಕನಗರದಲ್ಲಿ ನಡೆದಿದೆ. ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು, ಮಹಿಳೆ ಕೋಮಾಕ್ಕೆ ಜಾರಿದ್ದಾಳೆ ಎನ್ನಲಾಗಿದೆ.
ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕನಕನಗರದಲ್ಲಿ ಈ ಪ್ರಕರಣ ನಡೆದಿದೆ. ಕಳೆದ ಮೂರು ದಿನದ ಹಿಂದ ನಡೆದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಛಾವಣಿಯ ಮೇಲೆ ಕೆಲವು ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಈ ವೇಳೆ ಮಹಿಳೆ ಪತಿ ಆಕೆಯನ್ನು ಕೈನಿಂದ ಹಿಡಿದು ರಕ್ಷಣೆ ಮಾಡಲು ಮುಂದಾಗಿದ್ದರು ಕೂಡ ಅದು ಕೊನೆಗೆ ಫಲನಿಡದೇ ಆಕೆ ನೆಲಕ್ಕೆ ಬಿದ್ದಿದ್ದಾಳೆ. ಈ ನಡುವೆ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಸ್ಥಿತಿ ಇಲ್ಲಿ ಗಂಭೀರವಾಗಿದೆ ಎನ್ನಲಾಗಿದೆ. ಡಿಜೆ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ
Laxmi News 24×7