Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ನಿಬ್ಬೆರಗಾಗಿಸುವ ಜಲಯೋಗ ಸಾಧಕ: 3 ತಾಸು ನೀರಿನಲ್ಲಿ ತೇಲುವ 72ರ ವೃದ್ಧ!

ನಿಬ್ಬೆರಗಾಗಿಸುವ ಜಲಯೋಗ ಸಾಧಕ: 3 ತಾಸು ನೀರಿನಲ್ಲಿ ತೇಲುವ 72ರ ವೃದ್ಧ!

Spread the love

ಬ್ಬೂರ: 72 ವರ್ಷದ ಈ ಹಿರಿಯರು ಜಲಯೋಗದಲ್ಲಿ ವಿಶ್ವದಾಖಲೆ ಮಾಡಿದ್ದಾರೆ. ರಾಷ್ಟ್ರ- ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ನೀರಿನ ಮೇಲೆ ಮೂರು ತಾಸಿಗೂ ಅಧಕ ಸಮಯ ಲೀಲಾಜಾಲವಾಗಿ ಯೋಗದ ಭಂಗಿಗಳನ್ನು ಪ್ರದರ್ಶಿಸುತ್ತಾರೆ. ಅವರ ಸಾಮರ್ಥ್ಯ, ಚುರುಕುತನ ಹಾಗೂ ಕ್ರಿಯಾಶೀಲ ವ್ಯಕ್ತಿತ್ವ ಎಂಥವರನ್ನೂ ನಿಬ್ಬೆರಗು ಮಾಡುತ್ತದೆ.

ನಿಬ್ಬೆರಗಾಗಿಸುವ ಜಲಯೋಗ ಸಾಧಕ: 3 ತಾಸು ನೀರಿನಲ್ಲಿ ತೇಲುವ 72ರ ವೃದ್ಧ!

ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಪಟ್ಟಣದ ಪ್ರಕಾಶ ಬಸಲಿಂಗಪ್ಪ ಬೆಲ್ಲದ ಅವರೇ ಈ ಯೋಗ ಸಾಧಕ. ಬ್ಯಾಂಕ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅವರು 37 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ. 100 ಅಡಿ ಆಳದ ಬಾವಿಯಲ್ಲಿ ಜಲಯೋಗ ಮಾಡುವುದರಲ್ಲಿ ಸಿದ್ಧಹರಸ್ತರು. ಬಾವಿ ದಡದಲ್ಲಿ ತಮ್ಮ ಗುರುವಿನ ಮೂರ್ತಿಯನ್ನು ಸ್ಥಾಪಿಸಿಕೊಂಡು ಏಕಲವ್ಯನಂತೆ ಅವರೇ ಯೋಗ ಕಲಿತಿದ್ದು ವಿಶೇಷ.

ನಿಬ್ಬೆರಗು ಮಾಡುವ ಯೋಗಾಸನಗಳು: ನೀರಿನಲ್ಲಿ ನೇರವಾಗಿ ನಿಲ್ಲುವ ಜಲಸ್ತಂಭ ಆಸನ ಯಾರನ್ನಾದರೂ ನಿಬ್ಬೆರಗು ಮಾಡುತ್ತದೆ. ಸಾಕಷ್ಟು ಅಭ್ಯಾಸದ ಫಲವಾಗಿ ಈ ಯೋಗವನ್ನು ಪ್ರಕಾಶ ಅವರು ಸಿದ್ಧಿಸಿಕೊಂಡಿದ್ದಾರೆ. ಪರ್ವತಾಸನ, ಗರುಡಾಸನ, ವೃಕ್ಷಾಸನ, ಪದ್ಮಾಸನ, ಶವಾಸನ, ಗೋಮುಖಾಸನ, ಉತ್ಕಟಾಸನ, ಮಲ್ಕಾಸನ… ಹೀಗೆ ಹಲವಾರು ಜಲ ಯೋಗಾಸನಗಳು ಯುವಜನರಿಗೆ ಮಾದರಿಯಾಗಿವೆ.

ಇಷ್ಟೆಲ್ಲ ಸಾಧನೆ ಮಾಡಿದ ಮೇಲೂ ಅವರು ಪ್ರಶಸ್ತಿಗಳ ಹಿಂದೆ ಬೀಳಲಿಲ್ಲ. ಅವರು ಒಡ್ಡಿದ ಸ್ಪರ್ಧೆ ಹಾಗೂ ವ್ಯಕ್ತಿತ್ವಕ್ಕೆ ಪ್ರಶಸ್ತಿ- ಬಹುಮಾನಗಳು ಹುಡುಕಿಕೊಂಡು ಬಂದಿವೆ.


Spread the love

About Laxminews 24x7

Check Also

3 ದಿನ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ

Spread the love ಬೆಂಗಳೂರು : ರಾಜ್ಯಕ್ಕೆ ಬರುವ ಅನುದಾನಗಳ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ