ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮುಚ್ಚಿ ಹಾಕಲು ದರ್ಶನ್ ಏನೆಲ್ಲಾ ಮಾಡಲು ಯತ್ನಿಸಿದ್ದರು ಎಂಬ ಸ್ಪೋಟಕ ವಿಚಾರ ಬಯಲಾಗಿದೆ. ಮೊನ್ನೆಯಷ್ಟೇ ಆರ್ಆರ್ ನಗರದಲ್ಲಿರುವ ನಟ ದರ್ಶನ್ ಮನೆಯಲ್ಲಿ ಮತ್ತೆ 37 ಲಕ್ಷದ 40 ಸಾವಿರ ಹಣವನ್ನು, ಪತ್ನಿ ವಿಜಯಲಕ್ಷ್ಮಿ ಬಳಿಯಿಂದ 3 ಲಕ್ಷ ರೂ.ಹಣವನ್ನು ಸೀಜ್ ಮಾಡಲಾಗಿದೆ.
ದರ್ಶನ್ ಮನೆಯ ಬೆಡ್ ರೂಮ್ ನಲ್ಲಿ ಕಬೋಡ್ ನಲ್ಲಿ 37 ಲಕ್ಷ ಹಣ ಸೀಜ್ ಆಗಿದೆ ಎಂದು ವರದಿ ಆಗಿದೆ. ಬ್ಯಾಗ್ ಒಳಗೆ ಇದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರಂತೆ. ಅಷ್ಟೇ ಅಲ್ಲದೇ ವಿಜಯಲಕ್ಷ್ಮಿ ಇರುವ ಅಪಾರ್ಟ್ ಮೆಂಟ್ ನಲ್ಲೂ ಪೊಲೀಸರು 3 ಲಕ್ಷ ಹಣವನ್ನು ಸೀಜ್ ಮಾಡಿದ್ದಾರೆ ಎಂದು ವರದಿ ಆಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಹೇಳದಂತೆ ಡೀಲ್ ಕೂಡ ಮಾಡಿದ್ದರಂತೆ. ಡೀಲ್ ಗಾಗಿ ನೀಡಿದ್ದ 30 ಲಕ್ಷ ರೂ. ಹಣವನ್ನು ಈ ಹಿಂದೆಯೇ ಪೊಲೀಸರು ಸೀಜ್ ಮಾಡಿದ್ದರು ಎಂದು ವರದಿ ಆಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೂ 70 ಲಕ್ಷದ 40 ಸಾವಿರ ಹಣವನ್ನು ಸೀಜ್ ಮಾಡಿದ್ದಾರೆ ಎನ್ನಲಾಗ್ತಿದೆ.
ಈ ಹಣದ ಬೆನ್ನತ್ತಿದ್ದ ಪೊಲೀಸರಿಗೆ, ಶಾಸಕರೊಬ್ಬರ ಆಪ್ತನ ಲಿಂಕ್ ಪತ್ತೆಯಾಗಿದೆ. ತಮ್ಮ ಆಪ್ತ ಮೋಹನ್‌ರಾಜ್ ಎನ್ನುವವರ ಬಳಿ ದರ್ಶನ್ 40 ಲಕ್ಷ ರೂಪಾಯಿ ಕೈಸಾಲ ಮಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ. ವಿಚಾರಣೆ ಮುಂದಾಗುತ್ತಿದ್ದಂತೆ ಮೋಹನ್‌ರಾಜ್ ಮೊಬೈಲ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ದರ್ಶನ್‌ಗೆ ಈ ಹಣ ನೀಡುವಾಗ ಮೋಹನ್‌ರಾಜ್‌ಗೆ ಕೊಲೆ ವಿಚಾರ ಗೊತ್ತಾಗಿತ್ತಾ ಇಲ್ವಾ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಒಂದೊಮ್ಮೆ ಕೊಲೆ ಪ್ರಕರಣ ಮೊದಲೇ ಗೊತ್ತಿತ್ತು ಎನ್ನುವುದಾದ್ರೆ ಮೋಹನ್‌ರಾಜ್‌ಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
Laxmi News 24×7