Breaking News

ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್

Spread the love

ಬೆಂಗಳೂರು: ಆನ್‌ ಲೈನ್‌ ವಸ್ತುಗಳು ಡೆಲಿವರಿ ಮಾಡಿದ ನಂತರ ತಾವು ಆರ್ಡರ್‌ ಮಾಡಿದ ವಸ್ತುವಿನ ಬದಲು ಬೇರೇನೊ ಬಂದಿರುವುದು ಸಾಮಾನ್ಯವಾಗಿದ್ದು, ಈಗಾಗಲೇ ಇಂತಹ ಹಲವು ಘಟನೆ ನಡೆದಿತ್ತು. ಆದರೆ ಈ ಬಾರಿ ಅಮೆಜಾನ್‌ ಕಳುಹಿಸಿದ್ದ ವಸ್ತು ಕಂಡು ಬೆಂಗಳೂರಿನ ಮಹಿಳೆಯೊಬ್ಬರು ಕಂಗಾಲಾಗಿ ಹೋದ ಘಟನೆ ನಡೆದಿದೆ.

 

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

ಉದ್ಯಾನನಗರಿಯ ಸರ್ಜಾಪುರ್‌ ರಸ್ತೆ ನಿವಾಸಿಯಾಗಿರುವ ಮಹಿಳೆ ಅಮೆಜಾನ್‌ ನಲ್ಲಿ Xbox ಕಂಟ್ರೋಲರ್‌ ಅನ್ನು ಆರ್ಡರ್‌ ಮಾಡಿದ್ದರು. ಕೆಲವು ದಿನಗಳ ನಂತರ ಅಮೆಜಾನ್‌ ನಿಂದ ಪಾರ್ಸೆಲ್‌ ಡೆಲಿವರಿ ಬಂದಿತ್ತು. Xbox ಕಂಟ್ರೋಲರ್‌ ಬಂದಿದೆ ಎಂದು ಮಹಿಳೆ ಪಾರ್ಸೆಲ್‌ ಓಪನ್‌ ಮಾಡಿದಾಗ ಬೊಬ್ಬೆ ಹೊಡೆದು ಹಿಂದೆ ಸರಿದುಬಿಟ್ಟಿದ್ದರು! ಯಾಕೆಂದರೆ ಪಾರ್ಸೆಲ್‌ ನಲ್ಲಿ ವಿಷಕಾರಿ ಹಾವು ಸುರುಳಿ ಸುತ್ತಿಕೊಂಡಿತ್ತು.

ಅದೃಷ್ಟವಶಾತ್‌ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಣ ಹಾವು ಗಮ್‌ ಟೇಪ್‌ ಗೆ ಸಿಕ್ಕಿಹಾಕಿಕೊಂಡು ಹೊರಬರಲು ಪ್ರಯತ್ನಪಡುತ್ತಿರುವುದು ವಿಡಿಯೋದಲ್ಲಿದೆ. ಘಟನೆ ಬಗ್ಗೆ ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದು, ಇದು ವೈರಲ್‌ ಆಗಿದೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ