Breaking News
Home / ರಾಜಕೀಯ / ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

Spread the love

ವದೆಹಲಿ: 2017ರಲ್ಲಿ ಮಾರುಕಟ್ಟೆಗೆ ಬಂದ ಟಾಟಾ ನೆಕ್ಸಾನ್‌(Tata Nexon), 2021ರಿಂದ 2023ರವರೆಗೆ ಸತತ ಮೂರು ವರ್ಷಗಳ ಕಾಲ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಎಸ್‌ ಯುವಿ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.

 

ಟಾಟಾ ನೆಕ್ಸಾನ್‌ ಮಾರುಕಟ್ಟೆಗೆ ಬಿಡುಗಡೆಗೊಂಡ ಏಳು ವರ್ಷಗಳಲ್ಲಿ ಟಾಟಾ ನೆಕ್ಸಾನ್‌ ಏಳು ಲಕ್ಷ ಮಾರಾಟ ಕಂಡಿರುವುದು ಟಾಟಾ ಮೋಟಾರ್ಸ್‌ ಸಂಭ್ರಮಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ 2018ರಲ್ಲಿ ಗ್ಲೋಬಲ್‌ NCAPನಿಂದ 5 ಸ್ಟಾರ್‌ ರೇಟಿಂಗ್‌ ಪಡೆದ ಭಾರತದ ಮೊದಲ ಕಾರು ಇದಾಗಿದೆ.

2024ರ ಫೆಬ್ರವರಿಯಲ್ಲಿ New gen Nexon ಕೂಡಾ ಜಿಎನ್‌ ಸಿಎಪಿ 5 ಸ್ಟಾರ್‌ ರೇಟಿಂಗ್‌ ಪಡೆದಿದೆ. ಇತ್ತೀಚೆಗಷ್ಟೇ ನೆಕ್ಸಾನ್‌.ev ಭಾರತ್‌ ಎನ್‌ ಸಿಎಪಿಯಿಂದ 5 ಸ್ಟಾರ್‌ ರೇಟಿಂಗ್‌ ಪಡೆದಿರುವುದಾಗಿ ವರದಿ ವಿವರಿಸಿದೆ.

ಪೆಟ್ರೋಲ್‌, ಡೀಸೆಲ್‌ ಮತ್ತು ಎಲೆಕ್ಟ್ರಿಕ್‌ ನೆಕ್ಸಾನ್‌ ಎಸ್‌ ಯುವಿ ಲಭ್ಯವಿದ್ದು, ಕಳೆದ ಎರಡು ವರ್ಷಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ನೆಕ್ಸಾನ್‌ ಎಸ್‌ ಯುವಿ ಮಾರಾಟವಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗಿ ಏಳು ವರ್ಷಗಳಲ್ಲಿ ನೆಕ್ಸಾನ್‌ ಏಳು ಲಕ್ಷ ಮಾರಾಟ ಕಂಡಿರುವುದಾಗಿ ತಿಳಿಸಿದೆ.

ಏಳು ಲಕ್ಷ ನೆಕ್ಸಾನ್‌ ಮಾರಾಟವಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಟಾಟಾ ಮೋಟಾರ್ಸ್‌ ಡೀಲರ್ಸ್‌ ಮತ್ತು ಶೋರೂಮ್‌ ಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಟಾಟಾ ಮೋಟಾರ್ಸ್‌ ತಿಳಿಸಿದೆ.


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ