ಮಡಿಕೇರಿ: ಧಾರೆ ಮುಹೂರ್ತ ಮುಗಿಸಿದ ವಧು ಕಲ್ಯಾಣ ಮಂಟಪದಿಂದ ನೇರವಾಗಿ ಮಡಿಕೇರಿಮಡಿಕೇರಿಯ ಅಶೋಕಪುರ ನಿವಾಸಿ ಸ್ವಾತಿ ಜೀವನ ಪರೀಕ್ಷೆ ಮುಗಿಸಿಕೊಂಡು ಕಲ್ಯಾಣ ಮಂಟಪದಿಂದ ನೇರವಾಗಿ ನಗರದ ಜೂನಿಯರ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿದ್ದಾರೆ. ವಿವಾಹ ದಿನಾಂಕಕ್ಕೂ ಮೊದಲು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದ ಸ್ವಾತಿ ಅವರಿಗೆ ಸುಂಟಿಕೊಪ್ಪದ ಮದುರಮ್ಮ ಪಟ್ಟಣದ ಸುರೇಶ್ ಅವರೊಂದಿಗೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಮದುವೆ ನಿಶ್ಚಯವಾಗಿತ್ತು.ಯ ಜ್ಯೂನಿಯರ್ ಕಾಲೇಜಿಗೆ ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದಾರೆ.ವಿಪರ್ಯಾಸವೆಂದರೆ ಪರೀಕ್ಷಾ ದಿನದಂದೇ ಧಾರೆ ಮುಹೂರ್ತಗಳು ಬಂದಿದ್ದವು. ಆದರೆ ಧೃತಿಗೆಡದೆ ಇಬ್ಬರ ಕುಟುಂಬದವರು ಸ್ವಾತಿ ಪರೀಕ್ಷೆಗೆ ಅಡ್ಡಿಯಾಗದಂತೆ ಬೆಳಗ್ಗೆ 6.30 ಗಂಟೆಯಿಂದ 9 ಗಂಟೆವರೆಗೆ ಇದ್ದಂತಹ ಶುಭಲಗ್ನದಲ್ಲಿ ಧಾರೆ ಮುಹೂರ್ತ ನಿಗದಿಪಡಿಸಿಕೊಂಡು ವಿವಾಹವನ್ನು ನೆರವೇರಿಸಿದ್ದಾರೆ