ಬೆಂಗಳೂರು: ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಲ್ಲ. ಬಿಜೆಪಿ ಚುನಾವಣೆಯ ವಿಧಾನವೇ ಬೇರೆ ಇದೆ. ಅಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವುದು ಕಷ್ಟ ಎನ್ನುವ ಮೂಲಕ ಯುದ್ಧಕ್ಕೂ ಮೊದಲು ಶಸ್ತ್ರ ತ್ಯಾಗ ಮಾಡಿದಂತಾಗಿದೆ.
ನಗರದಲ್ಲಿ ಮಾಧ್ಯಮದವರ ಪ್ರಶ್ನೆ ಪ್ರತಿಕ್ರಿಯಿಸಿ, ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ. ನಿಲ್ಲಿಸಿದರು ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಮುಂದೆ ಗೆಲ್ಲುವುದು ಕಷ್ಠ. ಆದ ಕಾರಣ ಅಭ್ಯರ್ಥಿಗಳನ್ನು ನಿಲ್ಲಿಸುವ ಯೋಚನೆ ಮಾಡಿಲ್ಲ ಎಂದಿದ್ದಾರೆ.
ನಮ್ಮ ಅಭಿಪ್ರಾಯದೊಂದಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿಪ್ರಾಯವೂ ಮುಖ್ಯ. ಆದ ಕಾರಣ ಅವರ ಜೊತೆಗೂ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.