ಬೆಂಗಳೂರು, ನ.21- ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅನೇಕ ನಿರ್ಬಂಧ ಗಳಿರುವುದರಿಂದ 18ನೇ ಚಿತ್ರಸಂತೆಯನ್ನು ಆನ್‍ಲೈನ್ ಮೂಲಕ ನಡೆಸಲಾಗುವುದು ಎಂದು ಕರ್ನಾಟಕ ಚಿತ್ರಕಲಾ ಪರಿಷತ್‍ನ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 3ರಂದು ಆನ್‍ಲೈನ್ ಮೂಲಕ ಚಿತ್ರಸಂತೆ ಉದ್ಘಾಟಿಸಲಾಗುವುದು. ಚಿತ್ರಕಲಾ ಪರಿಷತ್ ಸ್ಥಾಪನೆಯಾಗಿ 60 ವರ್ಷವಾಗಿರುವ ಹಿನ್ನೆಲೆಯಲ್ಲಿ ವಜ್ರಮಹೋತ್ಸವದ ವರ್ಷಾಚರಣೆಯ ಅಂಗವಾಗಿ ಕಲೆಗೆ ಸಂಬಂಸಿದಂತೆ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುವುದು ಎಂದರು.
18ನೇ ಚಿತ್ರಸಂತೆಯನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಇನ್‍ಸ್ಟ್ರಾಗ್ರಾಂ, ಯೂಟೂಬ್ ಮತ್ತು chitrasanthe.org ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ತಿಂಗಳ ಅವಯವರೆಗೆ ವೀಕ್ಷಿಸಬಹುದು. 18ನೇ ಚಿತ್ರ ಸಂತೆಯನ್ನು ಕೊರೊನಾ ಯೋಧರ ಉದಾತ್ತ ಸೇವೆಗೆ ಅರ್ಪಣೆ ಮಾಡಲಾಗುವುದು ಎಂದರು.
https://youtu.be/e430w1sQT6E
Laxmi News 24×7