Breaking News

ನನಗೇನು ಗೊತ್ತಿಲ್ಲ, ನಾನೇನು ಮಾಡಿಲ್ಲ: ವಕೀಲರ ಮುಂದೆ ನಟ ದರ್ಶನ್ ಕಣ್ಣೀರು!

Spread the love

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಬಂಧಿಸಿದ್ದು ಬೋರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈ ಮಧ್ಯೆ ದರ್ಶನ್ ಅವರನ್ನು ವಕೀಲ ಅನಿಲ್ ಭೇಟಿ ಮಾಡಿದರು.ನನಗೇನು ಗೊತ್ತಿಲ್ಲ, ನಾನೇನು ಮಾಡಿಲ್ಲ: ವಕೀಲರ ಮುಂದೆ ನಟ ದರ್ಶನ್ ಕಣ್ಣೀರು!

ಈ ವೇಳೆ ದರ್ಶನ್ ನಾನೇನು ಮಾಡಿಲ್ಲ, ನನಗೇನು ಗೊತ್ತಿಲ್ಲ, ನನ್ನನ್ನು ಬಿಟ್ಟುಬಿಡಿ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಂಬಂಧಿ ಸುಶಾಂತ್ ದರ್ಶನ್ ಅವರನ್ನು ಭೇಟಿಯಾದರು. ನಂತರ ಸಂಬಂಧಿ ಫೋನ್ ಮೂಲಕ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಜೊತೆ ಮಾತನಾಡಿದರು. ಪತ್ನಿಗೆ ದರ್ಶನ್ ನಾನೇನು ಮಾಡಿಲ್ಲ. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದರ್ಶನ್ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್​, ಪವಿತ್ರಾ ಗೌಡ ಜೊತೆ ವಿ. ವಿನಯ್, ಆರ್. ನಾಗರಾಜು, ಎಂ. ಲಕ್ಷ್ಮಣ್​, ಎಸ್​. ಪ್ರದೋಶ್​, ಕೆ. ಪವನ್, ದೀಪಕ್​ ಕುಮಾರ್, ನಂದೀಶ್​, ಕಾರ್ತಿಕ್​, ನಿಖಿಲ್ ನಾಯಕ್​, ಕೇಶವಮೂರ್ತಿ, ರಾಘವೇಂದ್ರ ಅಲಿಯಾಸ್​ ರಾಘು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ಪಾಂಗುಳ ಗಲ್ಲಿಯ ರಸ್ತೆಯಲ್ಲಿ ಸ್ಟಾಲ್ ವಾಹನಗಳ ದ್ವಿಮುಖ ಪಾರ್ಕಿಂಗ್‌ನಿಂದಾಗಿ ಸಂಚಾರ ಸಮಸ್ಯೆ!!

Spread the love ಪಾಂಗುಳ ಗಲ್ಲಿಯ ರಸ್ತೆಯಲ್ಲಿ ಸ್ಟಾಲ್ ವಾಹನಗಳ ದ್ವಿಮುಖ ಪಾರ್ಕಿಂಗ್‌ನಿಂದಾಗಿ ಸಂಚಾರ ಸಮಸ್ಯೆ!! ಗಣೇಶೋತ್ಸವ ಕೇವಲ ಎಂಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ