Breaking News

ವಿದ್ಯಾರ್ಥಿಗಳು ಮಾನಸಿಕ ಸದೃಢತೆ ಕಾಪಾಡಿಕೊಂಡು ಅಧ್ಯಯನಕ್ಕೆ ಸಜ್ಜಾಗಿ: ಪ್ರವೀಣ

Spread the love

ಳ್ನಾವರ: ‘ಒತ್ತಡದ ಬದುಕಿನಲ್ಲಿ ಮಾನಸಿಕ ಸಮತೋಲನ ಕಾಪಾಡಿಕೊಂಡು ಅಧ್ಯಯನಕ್ಕೆ ವಿದ್ಯಾರ್ಥಿಗಳು ಸಜ್ಜಾಗಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರವೀಣ ಆನಂದಕಂದಾ ಹೇಳಿದರು.

ಕಾಲೇಜಿನಲ್ಲಿ ತೆರೆದ ನೂತನ ಜಿಮ್ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಜಿಮ್‌ನಲ್ಲಿ ಅಧುನಿಕ ಸಲಕರಣೆಗಳನ್ನು ಅಳವಡಿಸಲಾಗಿದೆ.

ಸತತ ಓದಿನ ಜೊತೆಗೆ ಏಕಾಗ್ರತೆ ಸಾಧಿಸಲು ಈ ಸಲಕರಣೆಗಳನ್ನು ಬಳಸಿಕೊಂಡು ದೈಹಿಕ ಶ್ರಮ ಹಾಕಬೇಕು’ ಎಂದರು.

ವಿದ್ಯಾರ್ಥಿಗಳು ಮಾನಸಿಕ ಸದೃಢತೆ ಕಾಪಾಡಿಕೊಂಡು ಅಧ್ಯಯನಕ್ಕೆ ಸಜ್ಜಾಗಿ: ಪ್ರವೀಣ

ಟೇಬಲ್ ಟೆನಿಸ್ ಕೋರ್ಟ್‌ನಲ್ಲಿ ಆಟವಾಡಿದ ಬಳಿಕ ಕ್ರೀಡಾ ವಿಭಾಗದ ಪ್ರಬಾರ ಮುಖ್ಯಸ್ಥ ಡಾ. ಪಿ.ಬಿ. ಚಾರಿ ಮಾತನಾಡಿ, ‘ಕಾಲೇಜು ಶಿಕ್ಷಣ ಇಲಾಖೆಯಿಂದ ದೊರೆತ ಈ ಸೌಲಭ್ಯವನ್ನು ಪ್ರತಿಯೊಬ್ಬರೂ ಸದುಪಯೋಗ ಮಾಡಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಸದೃಢತೆ ಸಾದಿಸಬೇಕು’ ಎಂದರು.

ವಾಣಿಜ್ಯ ವಿಭಾಗದ ಪ್ರೊ. ದೇವೇಂದ್ರ ತಳವಾರ, ಸುರೇಶ ದೊಡ್ಡಮನಿ, ಡಿ.ಎಫ್. ತಳವಾರ, ಭೀಮನಗೌಡ ಪಾಟೀಲ, ಉಮಾ ಅಂಗಡಿ, ಶೀರಿನಬಾನು, ಅಶೀಫ್ಅಲಿ ಹಂಚಿನಮನಿ, ಜೆ.ಎಸ್. ಕುರಿ, ಮಾರುತಿ ನಂದನ, ಸಿದ್ದೇಶ್ವರ ಕಣಬರ್ಗಿ ಇದ್ದರು.


Spread the love

About Laxminews 24x7

Check Also

ಹೋರಿ ತಿವಿದು ವೃದ್ಧ ಸಾವು, ಇಬ್ಬರು ಗಂಭೀರ

Spread the loveಹಾವೇರಿ: ಕೊಬ್ಬರಿ ಹೋರಿ ತಿವಿದು ಓರ್ವ ವಯೋವೃದ್ಧ ವ್ಯಕ್ತಿ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ಇಂದು ನಡೆಯಿತು. ಮೃತರನ್ನು 70 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ