ಬೆಂಗಳೂರು – ರಾಜ್ಯದಲ್ಲಿ ಫ್ಲ್ಯಾಟ್ ಕೊಳ್ಳುವವರಿಗೆ ರಾಜ್ಯ ಸರಕಾರ ಶುಭ ಸುದ್ದಿ ನೀಡಿದೆ.
ಕರ್ನಾಟಕ ಸ್ಟ್ಯಾಂಪ್ ಆ್ಯಕ್ಟ್ ಗೆ ತಿದ್ದುಪಡಿ ತರುವ ಮೂಲಕ ಸಣ್ಣ ಮತ್ತು ಮಧ್ಯಮ ವರ್ಗದವರಿಗೆ ಫ್ಲ್ಯಾಟ್ ಕೊಳ್ಳುವುದಕ್ಕೆ ಇರುವ ಸ್ಟ್ಯಾಂಪ್ ಡ್ಯೂಟಿಯನ್ನು ಗಣನೀಯವಾಗಿ ಇಳಿಸಿದೆ. ಈ ಕುರಿತು ಗುರುವಾರ ರಾಜ್ಯಪತ್ರ ಪ್ರಕಟವಾಗಿದೆ.
5 ಲಕ್ಷ ರೂ.ವರೆಗಿನ ಫ್ಲ್ಯಾಟ್ ಖರೀದಿಸುವವರಿಗೆ ಈವರೆಗೆ ಇದ್ದ ಶೇ.6ರ ಸ್ಟ್ಯಾಂಪ್ ಡ್ಯೂಟಿಯನ್ನು ಶೇ.2ಕ್ಕೆ ಇಳಿಸಲಾಗಿದೆ. 25 ಲಕ್ಷ ರೂ.ಗಳಿಂದ 35 ಲಕ್ಷ ರೂ.ಗಳವರೆಗಿನ ಸ್ಟ್ಯಾಂಪ್ ಡ್ಯೂಟಿಯನ್ನು ಶೇ.3ಕ್ಕೆ ಇಳಿಸಲಾಗಿದೆ.
ಇದರಿಂದಾಗಿ ಸಣ್ಣ ಮತ್ತು ಮಧ್ಯಮ ವರ್ಗದವರಿಗೆ ಫ್ಲ್ಯಾಟ್ ಖರೀದಿಯಲ್ಲಿ ಲಕ್ಷಾಂತರ ರೂ. ಉಳಿತಾಯವಾಗಲಿದೆ. ಹಾಗಾಗಿ ರಿಯಲ್ ಎಸ್ಟೇಟ್ ಉದ್ಯಮ ಮತ್ತೆ ಜಿಗಿತ ಕಾಣಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.
ಚೈತನ್ಯ ಕುಲಕರ್ಣಿ
ಈ ತಿದ್ದುಪಡಿ ಕುರಿತು ಕಳೆದ ಬಜೆಟ್ ನಲ್ಲೇ ಆಶ್ವಾಸನೆ ನೀಡಲಾಗಿತ್ತು. ಆದರೆ ಈವರೆಗೂ ಜಾರಿಗೊಂಡಿರಲಿಲ್ಲ. ನಿರಂತರ ಒತ್ತಡದ ನಂತರ ಈಗ ರಾಜ್ಯಪತ್ರ ಪ್ರಕಟವಾಗಿದೆ. ಇದರಿಂದ ಜನಸಾಮಾನ್ಯರಿಗೆ ಬಹಳಷ್ಟು ಪ್ರಮಾಣದಲ್ಲಿ ಲಾಭವಾಗಲಿದೆ.