ವಿಜಯಪುರ: ಕನ್ನಡಿಗರ ಮತ ಹೋಗುತ್ತೆ ಎಂದು ಸಿಎಂ ಯಡಿಯೂರಪ್ಪನವರು ಭಯ ಪಡಬೇಕಿಲ್ಲ. ಡಿ.5ರಂದು ಕರ್ನಾಟಕ ಬಂದ್ ಮಾಡುವುದಾಗಿ ಬೆದರಿಕೆ ಹಾಕಿರುವ ರೋಲ್ ಕಾಲ್ ಹೋರಾಟಗಾರರಿಗೂ ಅಂಜಬೇಕಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮರಾಠ ಅಭಿವೃದ್ಧಿ ನಿಗಮ ಹಿಂಪಡೆದರೆ ದೊಡ್ಡ ಅನಾಹುತ ಸಂಭವಿಸುತ್ತೆ. ನಮ್ಮ ರಕ್ಷಣೆ ಮಾಡಿದ ಶಿವಾಜಿ ಮಹಾರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಬೆಳಗಾವಿ ವಿಚಾರ, ಮರಾಠಿ ಭಾμÉಗೆ ಸಂಬಂಧಿಸಿದಂತೆ ಅಯೋಗ್ಯ ಅಜಿತ್ ಪವಾರ್ ಹೇಳಿಕೆಯನ್ನು ಖಂಡಿಸುತ್ತೇವೆ. ಆದರೆ ಕನ್ನಡಪರ ಹೋರಾಟದ ಹೆಸರಲ್ಲಿ ಕರ್ನಾಟಕ ಬಂದ್ ಸಲ್ಲದು. ಡಿ.5ರಂದು ಕರ್ನಾಟಕ ಬಂದ್ ಹೆಸರಲ್ಲಿ ವಿಜಯಪುರ ಬಂದ್ ಹೇಗೆ ಮಾಡುತ್ತಾರೆ ಎಂದು ನೋಡೋಣ ಎಂದು ಸವಾಲು
Laxmi News 24×7