Breaking News

ದೇವರ ಮುಂದೆ ಅಪ್ಪ- ಅಮ್ಮ ಕುಳಿತಿರುವ ಫೋಟೋ ಹಾಕಿಭಾವುಕರಾದ ಜಗ್ಗೇಶ್

Spread the love

ಬೆಂಗಳೂರು: ಇತ್ತೀಚೆಗಷ್ಟೇ ತಮ್ಮ ಸಿನಿ ಜರ್ನಿಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ ನವರಸ ನಾಯಕ ಜಗ್ಗೇಶ್ ಅವರು ಇದೀಗ ತಮ್ಮ ಅಪ್ಪ- ಅಮ್ಮನ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡು ಭಾವುಕರಾಗಿದ್ದಾರೆ.

ದೇವರ ಮುಂದೆ ಅಪ್ಪ- ಅಮ್ಮ ಕುಳಿತಿರುವ ಫೋಟೋ ಹಾಕಿ ಬರೆದುಕೊಂಡಿರುವ ಜಗ್ಗೇಶ್, ಹಿರಿ ಅಕ್ಕನಿಗೆ ಸಿಕ್ಕ ಕಳೆದು ಹೋಗಿದ್ದ ಅಮ್ಮ-ಅಪ್ಪನ ಜೊತೆಯಿದ್ದ ಅಪರೂಪದ ಚಿತ್ರ. ಇಬ್ಬರು ಹೀಗೆ ಒಟ್ಟಿಗೆ ಕೂತು ದಿನನಿತ್ಯ ಭಕ್ತಿಯಿಂದ ಶಿವಪೂಜೆ ಮಾಡುತ್ತಿದ್ದರು. ಸ್ನೇಹಿತರ ಸಹವಾಸ ದೋಷದಿಂದ ನಾನು ಅಪಾಪೋಲಿಯಂತೆ ಹೊಡೆದಾಟ, ಬಡಿದಾಟ ಮಾಡುತ್ತಾ ತಿಂಗಳುಗಟ್ಟಲೆ ಮನೆ ಸೇರದೆ ಹೊರ ಉಳಿಯುತ್ತಿದ್ದೆ. ಇಂತಹ ಅಮಾಯಕ ತಂದೆ-ತಾಯಿಗೆ ಅಪವಾದದ ಮಗನಾಗಿ ಬಿಟ್ಟಿದ್ದೆ. ಹಿರಿಯ ಮಗನಾಗಿ ದಾರಿತಪ್ಪಿದೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ