Breaking News

ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ರೆ ಲಿವರ್​ ಡ್ಯಾಮೇಜ್​ ಆಗುತ್ತದೆ?

Spread the love

ಬೆಂಗಳೂರು: ದೇಶದಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಅಧಿಕವಾಗಿಯೇ ಇದೆ. ಲಿಕ್ಕರ್​ ಕುಡಿಯುವುದು ಸಹ ಒಂದು ಚಟವಾಗಿ ಮಾರ್ಪಟ್ಟಿದೆ ಎಂದರೆ ಖಂಡಿತ ತಪ್ಪಾಗಲಾರದು. ಮದ್ಯ ಪ್ರಿಯರಿಗೆ ಇದನ್ನು ಸೇವಿಸುವುದರಿಂದ ಅದೇನೋ ಒಂದು ರೀತಿಯ ಖುಷಿ, ಉತ್ಸಾಹ ಲಭಿಸುತ್ತದೆ. ಕೆಲವರು ಆಲ್ಕೋಹಾಲ್ ಸೇವಿಸುವುದನ್ನು ದಿನನಿತ್ಯ ಅಭ್ಯಾಸ ಮಾಡಿಕೊಂಡರೆ, ಇನ್ನೂ ಕೆಲವರು ಟಾನಿಕ್ ರೀತಿ ರಾತ್ರಿಯ ವೇಳೆ ಕುಡಿಯುತ್ತಾರೆ.

ಈ ಮಧ್ಯೆ ಇತ್ತೀಚಿನ ವರದಿಯೊಂದು ಎಷ್ಟು ಪ್ರಮಾಣದಲ್ಲಿ ಕುಡಿಯುವುದರಿಂದ ಲಿವರ್ ಆರೊಗ್ಯ ಕಾಪಾಡಿಕೊಳ್ಳಬಹುದು ಹಾಗೂ ಎಷ್ಟು ಕ್ವಾಂಟಿಟಿ ಸೇವನೆ ಮಾಡಿದ್ರೆ ಡ್ಯಾಮೇಜ್ ಆಗಬಹುದು ಎಂಬುದರ ಮಾಹಿತಿ ಹಂಚಿಕೊಂಡಿದೆ. ಅದು ಹೀಗಿದೆ ನೋಡಿ.

ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ರೆ ಲಿವರ್​ ಡ್ಯಾಮೇಜ್​ ಆಗುತ್ತದೆ? ಮಹಿಳೆಯರಿಗೇ ಹೆಚ್ಚು ಆಪತ್ತು! ವರದಿ

ಯಾವುದೇ ಟೈಪ್ ಅಥವಾ ಕ್ವಾಂಟಿಟಿವುಳ್ಳ ಆಲ್ಕೋಹಾಲ್ ಸೇವನೆಯು ಲಿವರ್ ಆರೋಗ್ಯಕ್ಕೆ ಹಾನಿಕಾರ. ಈ ಸಂಗತಿ ಮದ್ಯಪ್ರಿಯರು ತಪ್ಪದೇ ತಿಳಿಯುವುದು ಉತ್ತಮ. ಪುರುಷರಿಗಿಂತ ಮಹಿಳೆಯರಿಗೆ ಇದರಿಂದ ಹೆಚ್ಚು ಹಾನಿ ಸಂಭವವಿರುವುದು ವರದಿಯಲ್ಲಿ ಪತ್ತೆಯಾಗಿದೆ. ಕಡಿಮೆ ಪ್ರಮಾಣದಲ್ಲಿ ಕುಡಿದರು ಕೂಡ ಮಹಿಳೆಯರಿಗೆ ಹೆಚ್ಚಿನ ಆಪತ್ತು ಎಂದು ವರದಿ ಉಲ್ಲೇಖಿಸಿದೆ.

ಅತೀಯಾಗಿ ಕುಡಿಯುವುದು, ವಾರಾಂತ್ಯದ ಪಾರ್ಟಿಗಳಲ್ಲಿ ನಶೆ ಏರುವಂತೆ ಸೇವಿಸುವುದು ಬಹಳ ಅಪಾಯಕಾರಿ. ಅನೇಕ ಯುವಕರು ಅಪರೂಪಕ್ಕೆ ಹೆಚ್ಚಾಗಿ ಕುಡಿಯುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭಾವಿಸಿ, ಅಳತೆ ಮೀರಿ ಮದ್ಯ ಸೇವಿಸುತ್ತಾರೆ. ಆದರೆ, ಇದು ಕೂಡ ಅತ್ಯಂತ ಡೆಂಜರೆಸ್​ ಎಂಬುದು ಗಮದಲ್ಲಿರಲಿ. ಲಿವರ್​ ಸಮಸ್ಯೆಯಿಂದ ಬಳಲುವವರು ಕೆಲವು ಸಮಯ ಮದ್ಯದಿಂದ ದೂರವಿದ್ದು, ಲಿವರ್ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ನಿರ್ಧರಿಸಿ, ತದನಂತರ ಮತ್ತೆ ಸೇವಿಸಲು ಪ್ರಾರಂಭಿಸುತ್ತಾರೆ. ಕೆಲವರಲ್ಲಿ ಅಲ್ಕೋಹಾಲ್ ತ್ಯಜಿಸಿದ ಬಳಿಕ ಫ್ಯಾಟಿ ಲಿವರ್​ ಕಂಡುಬರುತ್ತದೆ.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ