Breaking News

ಬುರುಡ ಸಮಾಜಕ್ಕೆ ಸರಕಾರದಿಂದ ಆರ್ಥಿಕ ನೆರವು ನೀಡುವಂತೆ ಒತ್ತಾಯಿ

Spread the love

ಚಿಕ್ಕೋಡಿ: ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್‍ದಿಂದಾಗಿ ಬಿದರಿನ ಬುಟ್ಟಿ ತಯಾರಿಸಿ ಬದುಕು ಸಾಗಿಸುತ್ತಿದ್ದ ಬುರುಡ(ಮೇದಾರ)ಸಂಕಷ್ಟದಲ್ಲಿದ್ದು, ಬುರುಡ ಸಮಾಜಕ್ಕೆ ಸರಕಾರದಿಂದ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ಶನಿವಾರ ಮೇದಾರ ಕೇತಯ್ಯ ಬುರುಡ ಸಮಾಜ ಸಂಘದಿಂದ ವಿಧಾನ ಪರಿಷತ್‍ನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರಿಗೆ ಮನವಿ ಅಲ್ಲಿಸಿದರು.


ಕೊರೊನಾ ಬಂದು ಲಾಕ್‍ಡೌನ್‍ದಿಂದ ಪರಿಶಿಷ್ಟ ಪಂಗಡದ ವರ್ಗದವರಾಗಿರುವ ನಾವು ನಮ್ಮ ಮೂಲ ಕಸುಬು ಬಿದರಿನ ಬುಟ್ಟಿ ಮತ್ತು ಮರಗಳು ಸೇರಿದಂತೆ ಇನ್ನಿತರ ಬಿದರಿನ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಅದರಿಂದ ಬುದುಕು ಸಾಗಿಸುತ್ತಿದ್ದೇವು. ನೆರೆಯ ಮಹಾರಾಷ್ಟ್ರದಿಂದ ಬಿದಿರುಗಳನ್ನು ತರಿಸಲಾಗುತ್ತಿತ್ತು. ಆದರೆ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳವಾಗಿದ್ದರಿಂದ ಅಲ್ಲಿಂದ ಬಿದಿರು ತರಿಸಿಕೊಳ್ಳಲು ಆಗುತ್ತಿಲ್ಲ.

ಹೀಗಾಗಿ ನಮ್ಮ ವ್ಯಾಪಾರ ವಹೀವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ನಾವು ಜೀವನ ನಡೆಸುವುದು ಕಷ್ಟಕರವಾಗಿದೆ. ನಮ್ಮ ಸಮಾಜದಲ್ಲಿಯೂ ಕಡುಬಡ ಕುಟುಂಬಗಳು ಸಾಕಷ್ಟು ಇವೆ. ಆದ್ದರಿಂದ ಸರಕಾರದಿಂದ ಬುರುಡ ಸಮಾಜ ಬಾಂದವರಿಗೂ ಆರ್ಥಿಕ ನೆರವು ಕೊಡುವ ಮೂಲಕ ಸಂಕಷ್ಟದಲ್ಲಿರುವ ಬರುಡ ಸಮಾಜ ಬಾಂದವರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ಪುರಸಭೆ ಸದಸ್ಯ ಮತ್ತು ಬುರುಡ ಸಮಾಜ ಮುಖಂಡ ನಾಗರಾಜ ಮೇದಾರ, ಚಂದ್ರಕಾಂತ ಬುರುಡ, ಶಂಕರ ಮೇದಾರ, ಸುರೇಶ ಕಾಳಿಂಗೆ, ಸದಾಶಿವ ಮಾಳಿ, ಕಾಶಿನಾಥ ಮಾಳಿ, ಗಣಪತಿ ಬುರುಡ, ರಾಘವೇಂದ್ರ ಬುರುಡ, ಮಹಾದೇವ ಬುರುಡ ಮುಂತಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Spread the love ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣದ ಕಾಂಪೌಂಡ್ ಬಳಿಯೇ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ