Breaking News

ಶ್ರೀ ಶ್ರೀ ಹರಿ ವಿಠಲ ಪಾಂಡುರಂಗ ದೇವರಿಗೆ ತೊಟ್ಟಿಲೋತ್ಸವ ಸೇವೆ !

Spread the love

ಹುಬ್ಬಳ್ಳಿ; ನಗರದ ಎಸ್.ಎಸ್. ಕೆ. ಪಂಚ ಟ್ರಸ್ಟ್, ಶ್ರೀ ದುರ್ಗಾದೇವಿ ದೇವಸ್ಥಾನ, ದಾಜಿಬಾನ ಪೇಟ,ಹುಬ್ಬಳ್ಳಿ ಈ ಸಂಸ್ಥೆಯ , ದಾಜಿಬಾನ ಪೇಟನಲ್ಲಿರುವ ಶ್ರೀ ಶ್ರೀ ಹರಿ ವಿಠಲ ಪಾಂಡುರಂಗ ಶ್ರೀ ರುಕ್ಮಾಯಿ ದೇವಸ್ಥಾನದಲ್ಲಿ ಶ್ರೀ ರಾಮನವಮಿ ನಿಮಿತ್ಯ, ಶ್ರೀ ಶ್ರೀ ಹರಿ ಪಾಂಡುರಂಗ ವಿಠ್ಠಲ ದೇವರಿಗೆ ತೊಟ್ಟಿಲೋತ್ಸವ ಪೂಜೆಯು ನೆರವೇರಿತು.

ಶ್ರೀ ರಾಮನವಮಿ ನಿಮಿತ್ಯ, ಶ್ರೀ ವಿಠ್ಠಲ ರುಕ್ಮಾಯಿ ಯರಿಗೆ ವಿಶೇಷ ಅಲಂಕಾರ ಮಾಡಿ,ಸಿಹಿ ನೈವೇದ್ಯ ಅರ್ಪಿಸಿ ಪೂಜೆ ಮಾಡಲಾಯಿತು.

ದೇವಸ್ಥಾನದಲ್ಲಿ ನೂರಾರು ಸುಮಂಗಲೆಯರು ಸೇರಿ ಶ್ರೀಹರಿ ವಿಠ್ಠಲ ಪಾಂಡುರಂಗ ದೇವರಿಗೆ ತೊಟ್ಟಿಲು ತೂಗಿ ಜೋಗುಳ ಹಾಡಿದರು.

ಪಾಂಡುರಂಗನ ಭಕ್ತರುಗಳಾದ ವಾರ್ಕರಿ ಮಂಡಳ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು, ಶ್ರೀ ಶ್ರೀಹರಿ ವಿಠ್ಠಲ ದೇವರ ದರ್ಶನ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.


Spread the love

About Laxminews 24x7

Check Also

ನೈಋತ್ಯ ರೈಲ್ವೆ ಟಿಕೆಟ್ ಪರಿಶೀಲನೆ ಪ್ರಕರಣ, ದಂಡ ಸಂಗ್ರಹದಲ್ಲಿ ಹೆಚ್ಚಳ

Spread the loveಹುಬ್ಬಳ್ಳಿ: ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಾದ್ಯಂತ ಟಿಕೆಟ್ ಪರಿಶೀಲನೆ ಮತ್ತು ನಿಯಮ ಜಾರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಪರಿಣಾಮವಾಗಿ, ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ