ಹುಬ್ಬಳ್ಳಿ: ಧರ್ಮ ಯುದ್ಧದಲ್ಲಿ ನಮ್ಮ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀ (Dingaleshwara Sri) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ದಿಂಗಾಲೇಶ್ವರ ಶ್ರೀಗಳಿಗೆ ಬೆಂಬಲ ಸೂಚಿಸಿ ಸನ್ಮಾನಿಸಿದರು.
ಈ ಸಭೆಯಲ್ಲಿ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಕ್ಷೇತ್ರದ ಮನೆ ಮನೆಯಲ್ಲಿ ಸ್ವಾಮೀಜಿಯನ್ನ ಬೆಂಬಲಿಸಬೇಕು ಅನ್ನೋ ಮಾತು ಕೇಳಿ ಬರುತ್ತಿದೆ. ಧರ್ಮಯುದ್ಧದಲ್ಲಿ (Lok Sabha Election 2024) ನಾವು ಗೆದ್ದೇ ಗೆಲ್ಲುತ್ತೇವೆ. ರಾಜ್ಯ ರೈತ ಸಂಘ ಹಸಿರು ಸೇನೆ ಬೆಂಬಲ ನೀಡಿರುವುದು ಆನೆಬಲ ತಂದಂತಾಗಿದೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಸ್ವಾಮೀಜಿ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂಬ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ನಮ್ಮ ಸಾಹಸ ಯಾವುದು ಎಂದು ಮುಂಬರುವ ದಿನಗಳಲ್ಲಿ ತಿಳಿಸುತ್ತೇವೆ ಎಂದು ತಿರುಗೇಟು ನೀಡಿದರು.
ಜೋಶಿಗೆ ಸೋಲಿನ ಭಯ
ನಾವು ಯಾವುದೇ ಮುಖಂಡರ ಜೊತೆಗೆ ಚರ್ಚೆಗೆ ಹೋಗಲ್ಲ. ನಾವು ಹೋಗುವುದು ಮತದಾರರ ಎದುರಿಗೆ ಮಾತ್ರ. ನಾನು ಸ್ಪರ್ಧಿಸುತ್ತಿರುವುದಕ್ಕೆ ಎಲ್ಲ ಸಮಾಜಗಳ ನೊಂದ ಜನರು ಖುಷಿಪಟ್ಟಿದ್ದಾರೆ. ಜೋಶಿ ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
Laxmi News 24×7