Breaking News

ಹೋಳಿಗೆ ಡಿಜೆ ಕಟ್ಟುನಿಟ್ಟಿನ ನಿಷೇಧ

Spread the love

ಗಂಗಾವತಿ: ಈ ಬಾರಿಯ ಹೋಳಿ ಹಬ್ಬದ ರಂಗ ಪಂಚಮಿ ಸಂದರ್ಭದಲ್ಲಿ ಡಿ ಜೆ ಹಾಕಲು ಪರವಾನಿಗೆ ನಿಷೇಧಿಸಲಾಗಿದೆ ಎಂದು ಡಿ.ವೈ.ಎಸ್. ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಹೇಳಿದರು.

ನಗರ ಪೊಲೀಸ್ ಠಾಣಾ ಸಭಾಂಗಣದಲ್ಲಿ ಹೋಳಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಯಾವುದೇ ಡಿಜೆ ಆಚರಣೆ ಸಂಪೂರ್ಣವಾಗಿ ನಿಷೇಧಿಸುವಂತೆ ಸೂಚನೆಯ ಹಿನ್ನೆಲೆಯಲ್ಲಿ ಹೋಳಿ ಹಬ್ಬ ಕಾಮದಾನ ಸಂದರ್ಭದಲ್ಲಿ ಮತ್ತು ರಂಗ ಪಂಚಮಿಯಂದು ಸಾರ್ವಜನಿಕರಿಗೆ ಬಣ್ಣ ಹಾಕಲು ಪರವಾನಿಗೆ ನೀಡುವುದಿಲ್ಲ.

Gangavati; ಹೋಳಿಗೆ ಡಿಜೆ ಕಟ್ಟುನಿಟ್ಟಿನ ನಿಷೇಧ: ಪೊಲೀಸ್ ಇಲಾಖೆ ಸ್ಪಷ್ಟನೆ

ಮತ್ತು ವೇದಿಕೆ ನಿರ್ಮಿಸಿ ಕಾರ್ಯಕ್ರಮ ಮಾಡಲು ಚುನಾವಣಾಧಿಕಾರಿಗಳ ಪರವಾನಿಗೆ ಅಗತ್ಯವಾಗಿರುತ್ತದೆ.ಯಾವುದೇ ಮೆರವಣಿಗೆ ಹಾಗೂ ಹೆಚ್ಚು ಜನ ಗುಂಪು ಸೇರಲು ಅವಕಾಶವಿರುವುದಿಲ್ಲ’ ಎಂದು ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಸೂಕ್ಷ್ಮ ಮತ್ತು ಅದೇ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಮುನ್ನೆಚ್ಚರಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಲ್ಲಾ ಕೋಮುಗಳ ಜನರು ಪೊಲೀಸ್ ಇಲಾಖೆ ಮತ್ತು ಚುನಾವಣಾ ಆಯೋಗದ ನಿಯಮಗಳಿಗೆ ಮನ್ನಣೆ ನೀಡಿ ಶಾಂತಿ ಸೌಹಾರ್ದತೆ ಕಾಪಾಡಬೇಕು. ಹೋಳಿ ಹಬ್ಬದ ಸಂದರ್ಭದಲ್ಲಿ ಕಾಮದಾನ ಮತ್ತು ರಂಗ ಪಂಚಮಿ ಎಂದು ಬಣ್ಣದಾಟವ ಪರಸ್ಪರ ಬಣ್ಣ ಹಚ್ಚುವಾಗ ಯಾವುದೇ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು.ಹಬ್ಬಗಳು ಎಲ್ಲಾ ಸಮುದಾಯದವರನ್ನು ಒಂದುಗೂಡಿಸುವ ಪವಿತ್ರ ಆಚರಣೆಗಳಾಗಿವೆ. ಆಚರಣೆಯಲ್ಲಿ ಯಾವುದೇ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.


Spread the love

About Laxminews 24x7

Check Also

ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ 2:1ರ ಅನುಪಾತ: ಗೆಜೆಟ್ ಅಧಿಸೂಚನೆ ಪ್ರಕಟ

Spread the loveಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಗೆ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿ ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಪ್ರಾಥಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ