ಭಾರತೀಯ ಚಿತ್ರರಂಗದ ಹಿರಿಯ ಅಭಿನೇತ್ರ ಮತ್ತು ನಾಟಕಕಾರ ಸೌಮಿತ್ರ ಚಟರ್ಜಿ (85) ಇನ್ನಿಲ್ಲ. ಒಂದು ತಿಂಗಳಿಗೂ ಹೆಚ್ಚು ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಚಟರ್ಜಿ ಇಂದು ಮಧ್ಯಾಹ್ನ 12.15ರ ಸಮಯದಲ್ಲಿ ವಯೋಸಹಜ ಬಹು ಅನಾರೋಗ್ಯದಿಂದ ಕೊನೆಯುಸಿರೆಳದರು. ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಅಭಿಮಾನಿಗಳನ್ನು ಸೌಮಿತ್ರ ಚಟರ್ಜಿ ಅಗಲಿದ್ದಾರೆ.
ಕೋವಿಡ್ ವೈರಸ್ ಸೋಂಕಿನಿಂದಾಗಿ ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಸೌಮಿತ್ರ ನಂತರ ಚೇತರಿಸಿಕೊಂಡರೂ ವಿವಿಧ ಅಂಗಾಂಗಗಳ ವೈಫಲ್ಯದಿಂದ ಕೊನೆಯುಸಿರೆಳೆದರು.