ಕೊಪ್ಪಳ,: ಅಂತರ್ಜಾತಿ ವಿವಾಹವಾಗಿದ್ದಕ್ಕೆ (Inter Caste Marriage) ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ ಅಮಾನವೀಯ ಘಟನೆ ಕೊಪ್ಪಳದ (Koppal) ಭಾಗ್ಯ ನಗರದಲ್ಲಿ (Bhagya Nagar) ನಡೆದಿರುವುದು ಗೊತ್ತಾಗಿದೆ. ಶಂಕ್ರಪ್ಪ ಬೇನಳ್ಳಿ ಎಂಬವರ ಕುಟುಂಬವನ್ನು ಕಳೆದ ಒಂದೂವರೆ ವರ್ಷದಿಂದ ಸಮಾಜದಿಂದ ಹೊರಗೆ ಇಡಲಾಗಿತ್ತು ಎಂಬ ಆರೋಪ ಈಗ ಕೇಳಿಬಂದಿದೆ. ಶಂಕ್ರಪ್ಪ ಅವರ ಪುತ್ರ ಅಂತರ್ಜಾತಿ ವಿವಾಹವಾಗಿದ್ದ. ಈ ಹಿನ್ನೆಲೆಯಲ್ಲಿ ಸಮಾಜದಿಂದ ಬಹಿಷ್ಕಾರ ಹಾಕಲಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.
ಶೆಂಕ್ರಪ್ಪ ಅವರ ಪುತ್ರ ಲಿಂಗಾಯತ ಸಮಾಜದ ಯುವತಿಯನ್ನು ಮದುವೆಯಾಗಿದ್ದರು. ಹೀಗಾಗಿ ವಾಲ್ಮೀಕಿ ಸಮಾಜದ ನಾಯಕರು ಶೆಂಕ್ರಪ್ಪ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದರು.
ಸಮಾಜದ ಯಾವುದೇ ಸಭೆ ಸಮಾರಂಭಗಳಿಗೆ ನಮಗೆ ಆಹ್ವಾನವಿಲ್ಲ. ಸಮಾಜದ ಬೇರೆ ಕುಟುಂಬದವರ ಕಾರ್ಯಕ್ರಮಕ್ಕೆ ಕೂಡಾ ಆಹ್ವಾನ ಇಲ್ಲ. ದಂಡ ಪಾವತಿ ಮಾಡುವ ವರಗೆ ಸಮಾಜದ ಯಾವುದೇ ಕಾರ್ಯಕ್ರಮಕ್ಕೆ ಕರೆಯಬಾರು ಎಂದು ಸಮಾಜದ ಮುಖಂಡರಿಂದ ಆದೇಶವಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.