Breaking News

ಬಿಜೆಪಿಯಲ್ಲಿ ಯಾರೂ ಶಾಸಕರಾಗಬೇಕು. ಲೋಕಸಭಾ ಸದಸ್ಯರಾಗಬೇಕು ಪ್ರಕಾಶ ಹುಕ್ಕೇರಿ ಹೇಳಿಕೆಗೆ ವಿಧಾನ ಪರಿಷತ್ ಮುಖ್ಯಸಚೇತಕ  ಮಹಾಂತೇಶ ಕವಟಗಿಮಠ ತಿರುಗೇಟು

Spread the love

ಚಿಕ್ಕೋಡಿ : ಸುರೇಶ ಅಂಗಡಿ ಕುಟುಂಬದವರಿಗೆ ಬೆಳಗಾವಿ ಲೋಕಸಭಾ ಟಿಕೆಟ್ ನೀಡಿದ್ರೆ , ನಾನು ಗೆಲ್ಲಿಸಲು ಪ್ರಯತ್ನಿಸುತ್ತೇನೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿಕೆಗೆ ವಿಧಾನ ಪರಿಷತ್ ಮುಖ್ಯಸಚೇತಕ  ಮಹಾಂತೇಶ ಕವಟಗಿಮಠ ತಿರುಗೇಟು ನೀಡಿದ್ದಾರೆ.

ತಾಲ್ಲೂಕಿನ ನವಲಿಹಾಳ ಗ್ರಾಮದಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಿರಿಯರು. ಅವರು ತಮ್ಮ ಪಕ್ಷದಲ್ಲಿ ಯಾರು  ಅಭ್ಯರ್ಥಿಯಾಗಬೇಕು. ಯಾರನ್ನು ಲೋಕಸಭಾ ಸದಸ್ಯರಾಗಬೇಕೆಂದು ಹೇಳಿದ್ದರೇ ಅದನ್ನು ಸ್ವಾಗತಿಸುತ್ತಿದ್ದೇ. ಆದರೆ ಬಿಜೆಪಿಯಲ್ಲಿ ಯಾರೂ ಶಾಸಕರಾಗಬೇಕು. ಲೋಕಸಭಾ ಸದಸ್ಯರಾಗಬೇಕು ಎಂಬ ಹೇಳಿಕೆ ಅವರ ವಯೋಮಿತಿಗೆ ಶೋಭಿಸುವುದಿಲ್ಲ  ಎಂದು ವ್ಯಗ್ಯ ವಾಡಿದ್ದಾರೆ.

ನಾವು ಮಾತನಾಡುವ ಮಾತಿಗೆ ಸಾರ್ವಜನಿಕ ಬದುಕಿನಲ್ಲಿ ಬಹಳಷ್ಟು ಮಹತ್ವವಿರುತ್ತದೆ. ಕಳೆದ ಸುಮಾರು 40 ವರ್ಷಗಳಿಂದ ಅವರು ಕಾಂಗ್ರೆಸ್ ಪಕ್ಷದಲ್ಲಿ ಫಲಾನುಭವಿಗಳಾಗಿದ್ದು, ಆ ಪಕ್ಷದ ಬೆಳವಣಿಗೆ ಮತ್ತು ಸಂಘಟನೆ ಬಗ್ಗೆ ಮಾತನಾಡದೇ, ಬೇರೆ ಪಕ್ಷದ ಸಂಘಟನೆ ಮತ್ತು ಬೇರೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯ ಕುರಿತು ಮಾತನಾಡುವುದು ಅವರ ವಯಸ್ಸಿಗೆ ಎಷ್ಟು ಶೋಭಿಸುತ್ತದೆ ಎಂದಿದ್ದಾರೆ.

ಅಭ್ಯರ್ಥಿಗಳನ್ನು ನಿರ್ಣಯ ಮಾಡುವವರು ಪಕ್ಷದ ವರಿಷ್ಠರು, ಹಿರಿಯ ನಾಯಕರು ಇದ್ದಾರೆ. ಅವರ ಬಿಜೆಪಿ ಪಕ್ಷದ ಸಂಘಟನೆ ಮತ್ತು ಅಭ್ಯರ್ಥಿಗಳ ಆಯ್ಕೆಯ ಕುರಿತು ಕಾಳಜಿ ಮಾಡುವ ಮತ್ತು ನಮಗೆ ಬುದ್ದಿ ಮಾತು ಹೇಳುವ ಅವಶ್ಯತಕೆ ಇಲ್ಲ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿಯವರಿಗೆ ಕಿವಿ ಮಾತು ಹೇಳಿದರು.

ಹಲವಾರು ಸಂದರ್ಭದಲ್ಲಿ ಆಗೀನ ಮುಖ್ಯಮಂತ್ರಿಗಳ ಮನವೊಲಿಸುವ ಈ ರೀತಿಯ ನಾನು ನಿಮ್ಮ ಪಕ್ಷಕ್ಕೆ ಬರುತ್ತೇನೆಂದು ಹೇಳುತ್ತಲೇ ಬಂದಿದ್ದಾರೆ. ಆದ್ದರಿಂದ ನಾವು ಅವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದರು.


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ