Breaking News

1 ಲಕ್ಷ ಲೀಟರ್ ನೀರಿನ ಸಂಗ್ರಹಣೆಯ ಸಾಮರ್ಥ್ಯವಿರುವ ಜಲಸಂಗ್ರಹಾಲಯ ಉದ್ಘಾಟನೆ: ಶಶಿಕಲಾ ಜೊಲ್ಲೆ

Spread the love

ಚಿಕ್ಕೋಡಿ: ಗ್ರಾಮದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಕ್ಷೇತ್ರದ ಪ್ರಜೆಗಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಲಭ್ಯವಾಗಬೇಕು ಎಂಬುದು ನನ್ನ ಗುರಿಯಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ನಿಪ್ಪಾಣಿ ಮತಕ್ಷೇತ್ರದ ಸುಳಗಾಂವ, ಆಡಿ, ಮತ್ತಿವಾಡೆ ಗ್ರಾಮದಲ್ಲಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ ಮಂಜೂರಾದ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ, 1 ಲಕ್ಷ ಲೀಟರ್ ನೀರಿನ ಸಂಗ್ರಹಣೆಯ ಸಾಮರ್ಥ್ಯವಿರುವ ಮೇಲ್ಮಟ್ಟದ ಜಲಸಂಗ್ರಹಾಲಯ ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಯನ್ನು ಎಲ್ಲರೂ ಸದ್ಭಳಕೆ ಮಾಡಿಕೊಂಡು, ಜಲ ಸಂರಕ್ಷಣೆ ಮಾಡಿ ಎಂದು ಹೇಳಿದರು.

ಪ್ರತಿಯೊಬ್ಬ ಪ್ರಜೆಗೂ ಶುದ್ಧ ಕುಡಿಯುವ ನೀರು ಹಾಗೂ ರಾಜ್ಯವನ್ನು ಜಲಸುಭದ್ರ ಮಾಡುವತ್ತ ನಮ್ಮ ಸರ್ಕಾರ ಹೆಜ್ಜೆಯಿಡುತ್ತಿದೆ. ಹೀಗಾಗಿ ಪ್ರಜಾಬಂಧುಗಳ ಸಧೃಡ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ವರೂ ಶುದ್ಧ ಕುಡಿಯವ ನೀರನ್ನು ಬಳಸಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳೋಣ ಎಂದರು.

ಈ ಸಂದರ್ಭದಲ್ಲಿ ಮಲಗೌಡ ಪಾಟೀಲ, ನೀಲಕಂಠ ಮಗದುಮ್ಮ ,ಬಾಳಗೌಡ ಪಾಟೀಲ, ನಿತಿನ ಪಾಟೀಲ, ರಾಜು ಪಾಟೀಲ,ಸಿದ್ದೇಶ್ವರ ಪಾಟೀಲ, ಊರಿನ ಗಣ್ಯರು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ನದ ಶೆಡ್​ಗೆ ಮಂಜೂರಾಗದ ಹಣ: ಪಂಚಾಯತ್ ಕಚೇರಿಯೊಳಗೆ ಎಮ್ಮೆ ಕಟ್ಟಿದ ರೈತ

Spread the loveಚಿಕ್ಕೋಡಿ: ದನದಕೊಟ್ಟಿಗೆ ನಿರ್ಮಾಣದ ಹಣ ಮಂಜೂರಾಗದ ಹಿನ್ನೆಲೆ ಬೇಸತ್ತ ರೈತರೊಬ್ಬರು ಗ್ರಾಮ ಪಂಚಾಯತ್ ಕಚೇರಿ ಒಳಗೆ ಎಮ್ಮೆ ಕಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ