ಹುಬ್ಬಳ್ಳಿ: ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀಮದ್ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳನ್ನು ಭಾನುವಾರ ಭೇಟಿಯಾಗಿ, ಆಶೀರ್ವಾದ ಪಡೆದರು.
ಹಾವೇರಿ ಜಿಲ್ಲೆ ಬಂಕಾಪುರದ ಆರಳೆಲೆ ಹಿರೇಮಠದಲ್ಲಿ ಜರುಗಿದ ಲಿಂಗೈಕ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಸುವರ್ಣ ಸ್ಮರಣೋತ್ಸವದಲ್ಲಿ ಚರಿತಾಮೃತ ಕೃತಿ ಬಿಡುಗಡೆ ಮಾಡಿ, ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದರು.
ದೇಶದಲ್ಲಿ ಸಾಂಸ್ಕೃತಿಕ ಪುನರುತ್ಥಾನ
ಈ ವೇಳೆ ರಂಭಾಪುರಿ ಶ್ರೀಗಳು ಮಾತನಾಡಿ, ಅಯೋಧ್ಯಾ ರಾಮಮಂದಿರ ನಿರ್ಮಾಣ, ಕಾಶಿ ಜೀರ್ಣೋದ್ಧಾರ ಸೇರಿದಂತೆ ದೇಶದಲ್ಲಿ ಸಾಂಸ್ಕೃತಿಕ ಪುನರುತ್ಥಾನ ಆಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿ, ಪರಶಿವನ ಆಶೀರ್ವಾದದಿಂದ ನಾಡು, ನಮ್ಮ ರಾಷ್ಟ್ರ ಸುಭೀಕ್ಷೆಯಾಗಿರಲಿ ಎಂದು ಹಾರೈಸಿದರು.
Laxmi News 24×7