ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ತಡಕೋಡ ಗ್ರಾಮದಲ್ಲಿ ಇತ್ತೀಚೆಗೆ ಸ್ಥಳೀಯ ಯುವಕನೊಬ್ಬ ರಾಮಮಂದಿರ ಮೇಲೆ ಹಸಿರು ಬಾವುಟ ಅಂಟಿಸಿದಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರಿಂದ ಗ್ರಾಮದಲ್ಲಿ ಏರ್ಪಟ್ಟ ಅಶಾಂತಿ ಹಿನ್ನೆಲೆಯಲ್ಲಿ ತಡಕೋಡ ಗ್ರಾಮ ಪಂಚಾಯ್ತಿಯಲ್ಲಿ ಗುರುವಾರ ಧಾರವಾಡ ಜಿಲ್ಲಾ ಎಸ್ಪಿ ಅವರ ನೇತೃತ್ವದಲ್ಲಿ ಶಾಂತಿಪಾಲನಾ ಸಭೆ ಜರುಗಿತು.
ಎಸ್ಪಿ ಡಾ.ಗೋಪಾಲ ಬ್ಯಾಕೋಡ ಮಾತನಾಡಿ, ‘ಎಲ್ಲ ಸಮುದಾಯದ ಜನರು ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಚಟುವಟಿಕೆಗಳಿಗೆ ಆಸ್ಪದ ಕೊಡಬಾರದು. ಗ್ರಾಮದಲ್ಲಿ ಗಲಾಟೆ ಮತ್ತು ಗೊಂದಲ ಸೃಷ್ಟಿಸಿದರೆ, ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತಡಕೋಡ ಗ್ರಾಮದ ಎಲ್ಲ ಸಮಾಜದ ಹಿರಿಯರು ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಧಾರವಾಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಗ್ರಾಮೀಣ ಡಿವೈಎಸ್ಪಿ ಎಸ್.ಎಂ. ನಾಗರಾಜ್, ಸಿಪಿಐ ಸಮೀರ ಮುಲ್ಲಾ, ಪಿಎಸ್‌ಐ ಬಸವರಾಜ ಕೊನ್ನೊರೆ, ಗ್ರಾಮದ ಹಿರಿಯರಾದ ಅಜ್ಜನಗೌಡ ಪಾಟೀಲ್, ಮಕ್ತುಂಸಾಬ ಬಿಡಿವಾಲೆ ಹಾಗೂ ಗ್ರಾಮಸ್ಥರು ಇದ್ದರು.