Breaking News

ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವರ ಸ್ಮಾರಕಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ.

Spread the love

ಕುಂದಗೋಳ: ಇಲ್ಲಿನ ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವರ ಸ್ಮಾರಕಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ.

ಕಿತ್ತುಹೋದ ಸ್ಮಾರಕದ ಚಾವಣಿ, ಆರಣದಲ್ಲಿ ಬೆಳೆದ ಕಳೆ ಕಸ, ಬಿದ್ದಿರುವ ಸಾರಾಯಿ ಪಾಕೀಟು, ಪ್ಲಾಸ್ಟಿಕ್‌, ದೂಳು ತುಂಬಿದ ಆವರಣ ಇದು ಪಟ್ಟಣದ ಹಿಂದೂಸ್ತಾನಿ ಸಂಗೀತಕ್ಕೆ ತನ್ನದೆ ಆದ ಕೊಡುಗೆ ನೀಡಿದ ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವರ ಸ್ಮಾರಕ ಭವನದ ದುಃಸ್ಥಿತಿಯನ್ನು ಹೇಳುತ್ತಿವೆ.

 

2010ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಭವನದ ಶಂಕುಸ್ಥಾಪನೆಯಾಗಿ, ಜಗದೀಶ ಶೆಟ್ಟರ್ ಅವರು ಸಿ.ಎಂ ಆಗಿದ್ದ ಸಮಯದಲ್ಲಿ ಉದ್ಘಾಟನೆಯಾಗಿತ್ತು. ಅಂದಾಜು ₹ 2.10ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಭವನ ಈಗ ಬಹುತೇಕ ಪಾಳುಬಿದ್ದಿದೆ.

2014ರವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿದ್ದ ಸ್ಮಾರಕ ಭವನ ನಂತರದ ದಿನಗಳಲ್ಲಿ ಕುಂದಗೋಳದ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಬಂದಿತು. ಸುಮಾರು 15 ಸರ್ಕಾರಿ ಕಾರ್ಯಕ್ರಮಗಳು ವರ್ಷವೊಂದರಲ್ಲಿ ನಡೆಯುತ್ತವೆ. ಸರ್ಕಾರಿ ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಭವನದ ಒಳಗಡೆ ದೂಳು ತುಂಬಿದೆ. ಸರಿಯಾದ ವಿದ್ಯುತ್ ವ್ಯವಸ್ಥೆಯಿಲ್ಲ. ವಿದ್ಯುತ್ ನಿಯಂತ್ರಣ ಕೊಠಡಿಯಲ್ಲಿ ಭದ್ರತೆಯಿಲ್ಲ. ಬಿಳಿ ಕಲ್ಲು, ಗೋಡೆಗಳು ದೂಳಿನಿಂದ ಕಪ್ವಿಟ್ಟಿವೆ.

ಕಾರ್ಯಕ್ರಮಗಳು ನಡೆಯುವ ಸಭಾಂಗಣದಲ್ಲಿ ಸುಮಾರು 420 ಆಸನಗಳಿದ್ದು ಅವು ಕೂಡ ದೂಳಿನಿಂದ ಆವೃತವಾಗಿವೆ. ಶಾರ್ಟ್ ಸರ್ಕಿಟ್‌ನಿಂದ ಅರ್ಧ ಸಭಾಂಗಣದ ವಿದ್ಯುತ್ ದೀಪಗಳು ಉರಿಯುತ್ತಿಲ್ಲ. ಅಲ್ಲಲ್ಲಿ ವಿದ್ಯುತ್ ದೀಪಗಳು ಮುರಿದು ಜೋತು ಬಿದ್ದಿವೆ. ಕೊನೆಯ ಕಾರ್ಯಕ್ರಮದ ಊಟಕ್ಕೆ ಬಳಸಿರುವ ಪ್ಲೇಟು ಇನ್ನು ಹಾಗೇ ಕೆಳ ಮಹಡಿಯಲ್ಲಿ ಹಾಗೇ ಬಿದ್ದಿವೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ