ಕಾರವಾರ, ಜ.25: ಆರೋಗ್ಯದ ಕಾರಣ ನೀಡಿ ನಾಲ್ಕು ವರ್ಷ ಜನರ ಕೈಗೆ ಸಿಗದಿದ್ದ ಬಿಜೆಪಿ ಸಂಸದಅನಂತ್ ಕುಮಾರ್ ಹೆಗಡೆ(Ananth Kumar Hegde) ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ (Uttara Kannada) ಕ್ಷೇತ್ರದಲ್ಲಿ ಆಯಕ್ಟಿವ್ ಆಗಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸಂಸದರ ನಿರ್ಧಾರಕ್ಕೆ ಸ್ವಪಕ್ಷದಲ್ಲೇ ಮಣ್ಣನೆ ಸಿಗುತ್ತಿಲ್ಲ ಎಂಬ ಅಂಶ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡುವ ಸಭೆಯಿಂದಾಗಿ ಹೊರಬಿದ್ದಿದೆ.
ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡುವ ಸಭೆ ಜನವರಿ 23 ರಂದು ನಡೆದಿದ್ದು, ಈ ಸಭೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಉತ್ತರ ಕನ್ನಡ ಬಿಜೆಪಿ ಜಿಲ್ಲಾದ್ಯಕ್ಷ ಎನ್ಎಸ್ ಹೆಗಡೆ ನಡುವೆ ಭಾರೀ ವಾಗ್ವಾದ ನಡೆದಿರುವುದು ಬಹಿರಂಗವಾಗಿದೆ.
 Laxmi News 24×7
Laxmi News 24×7
				 
		 
						
					 
						
					 
						
					