Breaking News

ಮನೆಯ ಟೆರೇಸ್ ಮೇಲೆ ನಿಂತು ಯುವತಿಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ ಯುವಕನ ವಿರುದ್ಧ ಧೈರ್ಯವಾಗಿ ದೂರು ನೀಡಿ ದ ಯುವತಿ

Spread the love

ಬೆಂಗಳೂರು: ಮನೆಯ ಟೆರೇಸ್ ಮೇಲೆ ನಿಂತು ಯುವತಿಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ ಯುವಕನ ವಿರುದ್ಧ ಧೈರ್ಯವಾಗಿ ದೂರು ನೀಡಿ ಯುವತಿ ಆರೋಪಿಗೆ ಬುದ್ಧಿ ಕಲಿಸಿರುವ ಘಟನೆ ನಗರದ ಕೋರಮಂಗಲದಲ್ಲಿ ನಡೆದಿದೆ.

ನಗರದ ಕೋರಮಂಗಲ ನಿವಾಸಿಯಾಗಿರುವ ನೂಪುರ್ ಸರಸ್ವತ್ ಅವರು ನವೆಂಬರ್ 8 ರಂದು ಸಾಮಾಜಿಕ ಜಾಲತಾಣ ಇನ್‍ಸ್ಟಾದಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಯುವಕನ ವಿರುದ್ಧ ಕ್ರಮಕೈಗೊಳ್ಳಲು ಮನವಿ ಮಾಡಿದ್ದರು. ಆತನ ಫೋಟೋಗಳನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದ ಅವರು, ಘಟನೆಯ ಕುರಿತು ಮಾಹಿತಿ ನೀಡಿ ಪೋಸ್ಟ್ ಮಾಡಿದ್ದರು.

ನೂಪುರ್ ಅವರು ಒಂದು ತಿಂಗಳ ಹಿಂದೆಯಷ್ಟೇ ಕೊರಮಂಗಲದ ಅಪಾರ್ಟ್‍ಮೆಂಟ್ ಒಂದಕ್ಕೆ ವಾಸಸ್ಥಳವನ್ನು ಬದಲಿಸಿದ್ದರು. ಹೀಗೆ ಒಮ್ಮೆ ಇವರು ಮನೆಯಲ್ಲಿದ್ದ ಸಂದರ್ಭದಲ್ಲಿ ಅಪಾರ್ಟ್‍ಮೆಂಟ್ ಪಕ್ಕದ ಬಿಲ್ಡಿಂಗ್‍ನಲ್ಲಿದ್ದ ಯುವಕ ಟೆರೇಸ್ ಮೇಲೆ ನಿಂತು ಸುಮಾರು 1 ಗಂಟೆಗೂ ಹೆಚ್ಚು ಮನೆಯ ಇವರನ್ನೇ ನೋಡುತ್ತಾ ನಿಂತ್ತಿದ್ದ. ಇವರು ವಾಸಿಸುತ್ತಿದ್ದ ನಿವಾಸದ ಕಿಟಕಿಯಿಂದ ಆತ ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.

ಈ ಕುರಿತು ಮಾಹಿತಿ ನೀಡಿ ಪೋಸ್ಟ್ ಮಾಡಿರುವ ನೂಪುರ್, ಆತನ ವರ್ತನೆ ನನಗೆ ಮುಜುಗರವನ್ನು ಉಂಟು ಮಾಡಿತ್ತು. ಆ ವೇಳೆ ನನಗೆ ಎರಡು ಅಂಶಗಳು ತಲೆಗೆ ಬಂದಿತ್ತು. ಮೊದಲು ಇದನ್ನು ಸಹಿಸಿಕೊಂಡು ಸುಮ್ಮನೆ ಕೂಡಬಾರದು. ಎರಡನೇಯದ್ದು, ಆತನಿಗೆ ನಾನು ವಾಸಿಸುವ ಮನೆ ಮಾಹಿತಿ ಎಂಬುದು ನನಗೆ ಹೆದರಿಕೆಯ ಭಾವನೆಯನ್ನು ಉಂಟು ಮಾಡಿತ್ತು. ಇದರಿಂದ ನಾನು ಆತನಿಗೆ ಬೈದು ಕೂಗಾಡಿದ್ದೆ. ಕೂಡಲೇ ಆತ ತನ್ನ ಪ್ಯಾಟ್ ಬಿಚ್ಚಿ ನನ್ನ ಕಡೆ ಅಸಹ್ಯವಾಗಿ ನಗು ಬೀರಿದ್ದ. ನಾನು ಫೋಟೋ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿ ಕ್ಯಾಮೆರಾ ತೆಗೆದುಕೊಂಡೆ. ಆ ವೇಳೆಗೆ ಆತ ಪ್ಯಾಟ್ ಹಾಕಿಕೊಂಡು ಅಲ್ಲಿಯೇ ನನ್ನನ್ನು ನೋಡುತ್ತಾ ನಿಂತಿದ್ದ ಎಂದು ಬರೆದುಕೊಂಡಿದ್ದಾರೆ.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ