ಹುಬ್ಬಳ್ಳಿಯ (Hubli) ರೈಲ್ವೆ ಕಾಲೋನಿಯಲ್ಲಿರುವ 13 ಎಕರೆ ರೈಲ್ವೆ ಇಲಾಖೆಯ ಸ್ವತ್ತನ್ನು ಕೇವಲ 83 ಕೋಟಿ ರೂ.ಗೆ 99 ವರ್ಷ ಪರಭಾರೆ ಮಾಡಲು ಹುನ್ನಾರ ನಡೆಸಲಾಗಿತ್ತು. ಐದು ಬಾರಿ ಟೆಂಡರ್ ಕರೆದು ರಿಜೆಕ್ಟ್ ಮಾಡಿದ ಹಾಗೆ ಮಾಡಿ, ಯಾರೂ ಬಂದಿಲ್ಲ ಎಂದು ಪರಭಾರೆ ಕೊಡೋಣ ಎಂಬ ಹುನ್ನಾರ ನಡೆಸಲಾಗಿತ್ತು.
ಕೇಂದ್ರ ಮಂತ್ರಿಯಾಗಿರುವ ಪ್ರಹ್ಲಾದ್ ಜೋಶಿಯವರು (Prahald joshi) ಮತ್ತು ಅವರ ಸಹಪಾಠಿಗಳು ಈ ಸ್ವತ್ತನ್ನು ಕಬಳಿಸಲು ಹುನ್ನಾರ ನಡೆಸಿದ್ದರು ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ (Ugrappa) ಆರೋಪಿಸಿದರು.
ಬಾಯಿ ಬಿಡದ ಮೌನಿ ಬಾಬಾ ಆಗಿದ್ದ ಪ್ರಹ್ಲಾದ್ ಜೋಶಿ ಅವರು ಈ ವಿಚಾರದ ಬಗ್ಗೆ ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜೆವಾಲರವರು ಪ್ರಸ್ತಾಪ ಮಾಡಿದ ಮೇಲೆ ಇದ್ದಕ್ಕಿದ್ದಂತೆ ನಾನು ಕಾಂಗ್ರೆಸ್ ಮತ್ತು ಸುರ್ಜೆವಾಲರವರ ಮೇಲೆ ಕೇಸ್ ಹಾಕುತ್ತೇನೆ ಎಂದಿದ್ದರು.
ಜೋಶಿ ಅವರು ಕೇಸ್ ಹಾಕಿದರೆ ಅವರ ಚರಿತ್ರೆ ಬಿಚ್ಚಿಡಲು ನಮಗೂ ಒಳ್ಳೆಯ ಅವಕಾಶ ಎಂದು ಕೇಸ್ ಹಾಕುವಂತೆ ತಿಳಿಸಿದೆವು. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯ ನಂತರ ರೈಲ್ವೇ ಇಲಾಖೆಯವರು ಸಂಪೂರ್ಣ ಟೆಂಡರ್ ಪ್ರಕ್ರಿಯೆಯನ್ನು ವಾಪಸ್ ತೆಗೆದುಕೊಂಡರು.