ಬೆಂಗಳೂರು: ಮಹಿಳೆ ಇಂದು ವಿಜ್ಞಾನ, ಬಾಹ್ಯಾಕಾಶ, ಎಂಜಿನಿಯರಿಂಗ್, ಸಂಶೋಧನೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸುತ್ತಾ ಬಂದಿದ್ದಾಳೆ. ಹೆಣ್ಣು ಮಗಳಿಗೆ ಅನುಕಂಪ (No sympathy) ಬೇಕಿಲ್ಲ. ಆಕೆಗೆ ಸಮರ್ಪಕವಾದ ಶಿಕ್ಷಣ ಕೊಡಬೇಕು, ಪ್ರೋತ್ಸಾಹ ಸಿಗಬೇಕು, ರಕ್ಷಣೆ ಕೊಡುವ ಕೆಲಸ ನಮ್ಮ-ನಿಮ್ಮೆಲ್ಲರದ್ದಾಗಿರಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕರೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಂದು ರಾಷ್ಟ್ರೀಯ ಹೆಣ್ಣು ಮಗು ದಿನ (National Girl Child Day) ಆಗಿದೆ. ಎಲ್ಲ ಹೆಣ್ಣು ಮಕ್ಕಳಿಗೆ ಶುಭಾಶಯಗಳು ಎಂದು ಹೇಳಿದ್ದಾರೆ. ಮಹಿಳೆಯನ್ನು ಪೂಜ್ಯನೀಯ ಸ್ಥಾನದಲ್ಲಿ ನೋಡುವ ನಮ್ಮ ಸಮಾಜವು ಏಳ್ಗೆ ವಿಷಯ ಬಂದಾಗ ಮರೆತುಬಿಡುತ್ತದೆ. ಇನ್ನು ಆ ರೀತಿಯಾಗಬಾರದು. ಸ್ತ್ರೀ ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
Laxmi News 24×7