ಬೆಂಗಳೂರು: ಭಾರತೀಯ ಶಾಸಕಾಂಗ ಮಂಡಳಿಯಲ್ಲಿ ದೀರ್ಘಾವಧಿ ಸದಸ್ಯರಾಗಿ ವಿಧಾನ ಪರಿಷತ್ (Legislative Council) ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರ ಹೆಸರನ್ನು ಭಾರತೀಯರ (indians) ವಿಶ್ವ ದಾಖಲೆಯ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ (world Limca Book of Records) ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
1980ರಿಂದ ಎಲ್ಲಾ ಚುನಾವಣೆಗಳಲ್ಲಿ ಜಯಗಳಿಸಿರುವ ಹೊರಟ್ಟಿ ಅವರು ವಿಧಾನ ಪರಿಷತ್ ಪ್ರವೇಶಿಸಿ 43 ವರ್ಷ 201 ದಿನಗಳಾಗಿವೆ. 2022ರಲ್ಲೇ ಅವರ ಹೆಸರು ಲಂಡನ್ನ ವರ್ಲ್ಡ್ ಬುಕ್ ಆಫ್ ದಾಖಲೆಗೆ ಸೇರ್ಪಡೆ ಆಗಿತ್ತು. ಈಗ ಭಾರತೀಯರ ವಿಶ್ವ ದಾಖಲೆಯ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿಸಲಾಗಿದೆ.
2022 ರಲ್ಲಿ ದಾಖಲೆಯ ಎಂಟನೇ ಬಾರಿಗೆ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಮರು ಆಯ್ಕೆಯಾದ ಬಸವರಾಜ ಹೊರಟ್ಟಿ ಅವರ ದಾಖಲೆಗಳನ್ನು 2024ನೇ ಸಾಲಿನ ವಾರ್ಷಿಕ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.
ಸಿಕ್ಕಿಂ ರಾಜ್ಯದ ಮಾಜಿ ಸಿಎಂ ಪವನ್ ಕುಮಾರ್ ಅವರರನ್ನೂ ಭಾರತೀಯರ ವಿಶ್ವ ದಾಖಲೆಯ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಪಟ್ಟಿಗೆ ಸೇರಿಸಲಾಗಿದ್ದು, ಅವರು ಭಾರತದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಯಾಗಿದ್ದಾರೆ. ಇವರ ಅಧಿಕಾರಾವಧಿ 24 ವರ್ಷ 165 ದಿನಗಳು. ಇವರು ಪಶ್ಚಿಮ ಬಂಗಾಳದ ಮಾಜಿ ಸಿಎಂ ಜ್ಯೋತಿ ಬಸು ಅವರ ದಾಖಲೆಯನ್ನು ಮುರಿದಿದ್ದಾರೆ.