Breaking News

ಫೆ. 9ರಿಂದ ಬಿಜೆಪಿ ಬೃಹತ್‌ ಅಭಿಯಾನ ಆರಂಭ

Spread the love

ಬೆಂಗಳೂರು: ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಬೆನ್ನಲ್ಲೇ ಲೋಕಸಭಾ ಸಮರಕ್ಕಾಗಿ ಪುಟಿದೆದ್ದಿರುವ ಬಿಜೆಪಿಯು ರಾಷ್ಟ್ರದ ಪ್ರತೀ ಗ್ರಾಮವನ್ನೂ ತಲುಪುವುದಕ್ಕೆ “ಗಾಂವ್‌ ಚಲೋ’ ಅಭಿಯಾನ ರೂಪಿಸಿದೆ.,
ಕರ್ನಾಟಕದಲ್ಲಿ 28 ಸಾವಿರ ಕಂದಾಯ ಗ್ರಾಮಗಳನ್ನು ಸಂಪರ್ಕಿಸುವ ಬೃಹತ್‌ ಅಭಿಯಾನ ಫೆ.

9ರಂದು ಚಾಲನೆ ಪಡೆಯಲಿದೆ.

ವಿಜಯೇಂದ್ರ ನೇತೃತ್ವದಲ್ಲಿ ಹೊಸ ತಂಡ ಅಧಿಕಾರಕ್ಕೆ ಬಂದ ಬಳಿಕದ ಮೊದಲ ಸಂಘಟನಾತ್ಮಕ ಪ್ರಕ್ರಿಯೆ ಇದು.

ಕಾರ್ಯಕ್ರಮವನ್ನು ಯಶಸ್ವಿಗೊಳಿ ಸುವುದಕ್ಕೆ ರಾಷ್ಟ್ರೀಯ ನಾಯಕರ ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ಸಂಘಟನಾತ್ಮಕವಾಗಿ ನುರಿತಿರುವ ಮಾಜಿ ಸಚಿವ ಸುನಿಲ್‌ ಕುಮಾರ್‌ ಅವರನ್ನು ಅಭಿಯಾನದ ಸಂಚಾಲಕರನ್ನಾಗಿ, ಎಬಿವಿಪಿಯಲ್ಲಿ ರಾಷ್ಟ್ರೀಯ ಮಟ್ಟದ ಜವಾಬ್ದಾರಿ ನಿರ್ವಹಿಸಿರುವ ವಿನಯ್‌ ಬಿದರೆ ಅವರನ್ನು ಸಹ ಸಂಚಾಲಕರನ್ನಾಗಿ ನಿಯೋಜಿಸಲಾಗಿದೆ.

-ದೇಶದಲ್ಲಿ 7 ಲಕ್ಷ ಗ್ರಾಮಗಳ ಸಂಪರ್ಕ
-ರಾಜ್ಯದಲ್ಲಿ 28 ಸಾವಿರ ಗ್ರಾಮ
-19 ಸಾವಿರ ನಗರ ಬೂತ್‌ ಸಂಪರ್ಕ
-40 ಸಾವಿರ ಪ್ರತಿನಿಧಿ ನೇಮಕ ಸಾಧ್ಯತೆ
ಇಂದು ಪೂರ್ವಭಾವಿ ಸಭೆ

ರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಿ “ಗಾಂವ್‌ ಚಲೋ’ ಅಭಿಯಾನ ಪ್ರಾರಂಭಿಸ ಲಾಗುತ್ತದೆ. ಬೂತ್‌ ಗೆದ್ದು ಕ್ಷೇತ್ರ ಗೆಲ್ಲ ಬೇಕೆಂಬುದು ಬಿಜೆಪಿಯ ಚುನಾವಣ ಧ್ಯೇಯ ವಾಕ್ಯ. ಪೇಜ್‌ ಪ್ರಮುಖ ರಿಂದ ಮೊದಲ್ಗೊಂಡು ಒಟ್ಟಾರೆ ಬೂತ್‌ ಸಶಕ್ತೀ ಕರಣ ಇದರ ಉದ್ದೇಶ. ಅಭಿಯಾನ ಯಶಸ್ವಿಗೊಳಿಸಿ 28 ಕ್ಷೇತ್ರವನ್ನೂ ಗೆಲ್ಲುವ ಪ್ರಯತ್ನ ನಡೆಸುತ್ತೇವೆ.
-ವಿ. ಸುನಿಲ್‌ಕುಮಾರ್‌,
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ


Spread the love

About Laxminews 24x7

Check Also

ಪತ್ನಿ ಬದುಕಿದ್ದರೂ, ಕೊಲೆ ಆರೋಪದಲ್ಲಿ ಅಮಾಯಕನಿಗೆ ಶಿಕ್ಷೆ: ಮೂವರು ಇನ್ಸ್​ಪೆಕ್ಟರ್​ಗಳು ಸಸ್ಪೆಂಡ್​

Spread the loveಮೈಸೂರು: ಪತ್ನಿ ಜೀವಂತವಾಗಿದ್ದರೂ ಆಕೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ಆದಿವಾಸಿ ಸುರೇಶ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ