ಹುಬ್ಬಳ್ಳಿ, : ಬದಾಮಿ ಬನಶಂಕರಿ (Badami Banshankari) ಮತ್ತುಸವದತ್ತಿಯಲ್ಲಮ್ಮನ (Savadatti Yellamma) ಗುಡ್ಡದ ರೇಣಕಾಂಬೆ ದೇವಿ ದೇವಸ್ಥಾನಗಳು ಉತ್ತರ ಕರ್ನಾಟಕದ ಪ್ರಮುಖ ಆದಿಶಕ್ತಿ ದೇವಲಾಯಗಳು. ನಿತ್ಯ ರಾಜ್ಯ ಮತ್ತು ಅಂತರಾಜ್ಯಗಳಿಂದ ಅಸಂಖ್ಯ ಭಕ್ತರು ಈ ದೇವಸ್ಥಾನಗಳಿಗೆ ಬರುತ್ತಾರೆ. ವರ್ಷದ ಪ್ರತೀ ಪೂರ್ಣಿಮೆಯಂದು ಯಲ್ಲಮ್ಮನ ಗುಡ್ಡದಲ್ಲಿ ಜಾತ್ರೆ ನಡೆಯುತ್ತದೆ. ಆದರೆ, ಡಿಸೆಂಬರ್ ತಿಂಗಳಲ್ಲಿ ಬರುವ ಹೊಸ್ತಿಲು ಹುಣ್ಣಿಮೆ, ಜನವರಿ ತಿಂಗಳಲ್ಲಿ ಬರುವ ಬನದ ಹುಣ್ಣಿಮೆ ಹಾಗೂ ಫೆಬ್ರುವರಿ ತಿಂಗಳಲ್ಲಿ ಬರುವ ಭರತ ಹುಣ್ಣಿಮೆ ಸಂದರ್ಭದಲ್ಲಿ ರೇಣುಕಾ ದೇವಿಯ ದೊಡ್ಡ ಜಾತ್ರೆಗಳು ನಡೆಯುತ್ತವೆ.
ಇನ್ನು ಜನವರಿ ತಿಂಗಳಿನಲ್ಲಿ ಬರುವ ಬನದ ಹುಣ್ಣಿಮೆಯಂದ ಬದಾಮಿ ಬನಶಂಕರಿಗೆ ಮತ್ತು ಯಲ್ಲಮ್ಮನ ಗುಡ್ಡದಲ್ಲಿ ಜಾತ್ರೆ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ತೆರಳುತ್ತಾರೆ. ಈ ಬಾರಿಯ ರೇಣುಕಾ ಯಲ್ಲಮ್ಮ ದೇವಿ ಹಾಗೂ ಬನಶಂಕರಿ ದೇವಿ ಜಾತ್ರೆ ಜ.23ರಿಂದ 30ರವರೆಗೆ ಜರುಗಲಿದೆ. ಹೀಗಾಗಿ ಎನ್‌ಡಬ್ಲ್ಯುಕೆಆರ್‌ಟಿಸಿ (NWKRTC) ಹುಬ್ಬಳ್ಳಿ ವಿಭಾಗವು ಬಾದಾಮಿ ಮತ್ತು ಸವದತ್ತಿಗೆ ಜ.23 ರಿಂದ 30 ರವರೆಗೆ ಜಾತ್ರೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್‌ಗಳನ್ನು ಬಿಟ್ಟಿದೆ.