ಅಫಜಲಪುರ : ಅಫಜಲಪುರ ತಾಲೂಕಿನ ಗ್ರಾಮವೊಂದರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಸಂಬಂಧಿಯೊಬ್ಬ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಗರ್ಭಿಣಿಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಪಾಲಕರಿಗೆ ಮಾಹಿತಿ
ಮೂಲಗಳು ತಿಳಿಸಿವೆ. ನಿಂಬರಗಾ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಆಳಂದ ತಾಲೂಕಿನ ಗ್ರಾಮವೊಂದಕ್ಕೆ ಸೇರಿದ್ದ ಈ ಬಾಲಕಿ, ವಸತಿ ಶಾಲೆಯಲ್ಲಿ ಇದ್ದಾಗ ಹೊಟ್ಟೆ ನೋವು ಎಂದು ತಿಳಿಸಿದಳು. ನಿಂಬರ್ಗಾ ಠಾಣೆಯಲ್ಲಿ FIR ದಾಖಲಾಗಿದೆ.
ಆಳಂದ್ ತಾಲೂಕಿನ ಗ್ರಾಮಕ್ಕೆ ಸೇರಿದ್ದ ಬಾಲಕಿ ಎಂದು ಹೇಳಲಾಗುತ್ತಿದ್ದು, ವಸತಿ ಶಾಲೆಯಲ್ಲಿ ಹೊಟ್ಟೆ ನೋವು ಎಂದಾಗ ಶಾಲೆಯ ಸಿಬ್ಬಂದಿ ಪಾಲಕರಿಗೆ ಮಾಹಿತಿ ನೀಡಿದ್ದರು . ಬಳಿಕ ಪೋಷಕರು ಮತ್ತು ಸಿಬ್ಬಂದಿ ಸೇರಿ ಸೋಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸ್ಕ್ಯಾನಿಂಗ್‌ನಲ್ಲಿ ಬಾಲಕಿ ಗರ್ಭಿಣಿಯಾಗಿರುವುದು ತಿಳಿದ ಪೋಷಕರು ಗಾಬರಿಗೊಂಡರು. ಕಳೆದ ತಿಂಗಳು ಅಂದರೆ ಡಿಸೆಂಬರ್ 16ರಂದು ಬಾಲಕಿಗೆ ಹೆರಿಗೆ ಆಗಿದ್ದು, ಗಂಡು ಮಗುವಿಗೆ ಜನ್ಮನೀಡಿದ್ದಾಳೆ.
ಘಟನೆ ಸಂಬಂಧ ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇರೆಗೆ ವಸತಿ ಶಾಲೆಯ ಪ್ರಾಚಾರ್ಯ ಮಲಕಪ್ಪ ಬಿರಾದಾರ ಮತ್ತು ನಿಲಯ ಪಾಲಕ
ಜಾವೇದ್ ಪಟೇಲ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಲಗುತ್ತಿದೆ.ಗರ್ಭಿಣಿಯಾಗಿ ಹೆರಿಗೆಯಾಗುವ ತನಕ ಯಾರೊಬ್ಬರು ಆಕೆಯ ಬಗ್ಗೆ ಗಮನಹರಿಸಿಲ್ಲ ಎಂದು ಆಮಾನತು ಆದೇಶದಲ್ಲಿ ಕರ್ನಾಟಕ ವಸತಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನವೀನ್ ಕುಮಾರ್ ರಾಜು ಉಲ್ಲೇಖಿಸಿದ್ದಾರೆ.
ಪ್ರಾಚಾರ್ಯರು ಹಾಗೂ ನಿಲಯ ಪಾಲಕರ ನಿರ್ಲಕ್ಷ್ಯದ ಈ ಬಗ್ಗೆ ಕಲಬುರಗಿ ಜಿಪಂ ಸಿಇಒ ವರದಿ ನೀಡಿದ್ದರು.ಪ್ರಾಚಾರ್ಯ ಹಾಗೂ ನಿಲಯ ಪಾಲಕರ ಅಮಾನತು ವಿಷಯ ತಿಳಿಯುತ್ತಿದ್ದಂತೆ ವಸತಿ ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ಶಾಲೆಯ ಮುಖ್ಯದ್ವಾರ ಬಳಿ ಜಮಾಯಿಸಿ ಪ್ರತಿಭ ಟನೆ ನಡೆಸಿದರು.
Laxmi News 24×7