ಬಡ್ಡಿ ಕೊಡುವುದಾಗಿ ಹಣ ಪಡೆದು ಗೃಹರಕ್ಷಕ ಸಿಬ್ಬಂದಿಗೆ ಕಾನ್ಸ್ಟೇಬಲ್ನಿಂದ ವಂಚನೆ
ಬಡ್ಡಿ ಕೊಡುವುದಾಗಿ ನಂಬಿಸಿ ಗೃಹ ರಕ್ಷಕ ಸಿಬ್ಬಂದಿಯಿಂದ 35 ಸಾವಿರ ರೂ. ಹಣ ಪಡೆದು ಕಾನ್ಸ್‌ಟೇಬಲ್ ವಂಚನೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ನೆಲಮಂಗಲ ಸಂಚಾರಿ ಠಾಣೆಯ ಕಾನ್ಸ್‌ಟೇಬಲ್ ಕಾರ್ತಿಕ್ರಿಂದ ಗೃಹರಕ್ಷಕ ದಳದ ಸಿಬ್ಬಂದಿ ರಾಜುಗೆ ವಂಚನೆ ಮಾಡಲಾಗಿದೆ. ನೆಲಮಂಗಲ ಟೌನ್ ಠಾಣೆಗೆ ಹೋಂಗಾರ್ಡ್ ರಾಜು ದೂರು ನೀಡಿದ್ದಾರೆ.
ನೆಲಮಂಗಲ, ಜನವರಿ 08: ಬಡ್ಡಿ ಕೊಡುವುದಾಗಿ ನಂಬಿಸಿ ಗೃಹ ರಕ್ಷಕ ಸಿಬ್ಬಂದಿಯಿಂದ 35 ಸಾವಿರ ರೂ. ಹಣ ಪಡೆದು ಕಾನ್ಸ್‌ಟೇಬಲ್ ವಂಚನೆ (Fraud) ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ನೆಲಮಂಗಲ ಸಂಚಾರಿ ಠಾಣೆಯ ಕಾನ್ಸ್‌ಟೇಬಲ್ ಕಾರ್ತಿಕ್ರಿಂದ ಗೃಹರಕ್ಷಕ ದಳದ ಸಿಬ್ಬಂದಿ ರಾಜುಗೆ ವಂಚನೆ ಮಾಡಲಾಗಿದೆ. ಅಡವಿಟ್ಟ ಕಾರು ಬಿಡಿಸಿಕೊಳ್ಳಲು ರಾಜು ಬಳಿಯಿಂದ ಹಣ ಪಡೆದಿದ್ದ.
ಕಾರ್ತಿಕ್ ಮಾತು ನಂಬಿ ರಾಜು ಬ್ಯಾಂಕ್‌ನಲ್ಲೇ ಹಣ ಕೊಟ್ಟಿದ್ದ. ಸಾಕ್ಷಿಗಾಗಿ ಬ್ಯಾಂಕಿನಲ್ಲಿ ಹಣ ಎಣಿಸುವ ದೃಶ್ಯ ಸೆರೆ ಹಿಡಿಯಲಾಗಿದೆ. ಇದೀಗ ಕಾನ್ಸ್‌ಟೇಬಲ್ ಕಾರ್ತಿಕ್ ಹಣ ವಾಪಸ್ ಕೇಳಿದರೆ ಸಬೂಬು ಹೇಳುತ್ತಿದ್ದಾರೆ. ಈ ಕುರಿತಾಗಿ ನೆಲಮಂಗಲ ಟೌನ್ ಠಾಣೆಗೆ ಹೋಂಗಾರ್ಡ್ ರಾಜು ದೂರು ನೀಡಿದ್ದಾರೆ.