ಬೆಂಗಳೂರು: ಮೊಬೈಲ್ ಬ್ಲಾಸ್ಟ್ (Mobile Blast) ಆಗಿ ಯುವಕನ ತೊಡೆಗೆ ಗಾಯವಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಬೆಂಗಳೂರಿನ ವೈಟ್ ಫಿಲ್ಡ್ ನಿವಾಸಿ ಪ್ರಸಾದ್ (24) ಗಾಯಗೊಂಡ ಯುವಕ. ಈತ ಅಕ್ಟೋಬರ್ ತಿಂಗಳಲ್ಲಿ ಒನ್ ಪ್ಲಸ್(1+) ಕಂಪನಿಯ ಮೊಬೈಲ್ ಖರೀದಿಸಿದ್ದ.
ಇಂದು ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದೆ. ಪರಿಣಾಮ ಆತನ ತೊಡೆಗೆ ಗಂಭೀರ ಗಾಯವಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಮೊಬೈಲ್ ಸೆಂಟರ್ಗೆ ಹೋದರೆ ಸರಿಯಾಗಿ ಸ್ಪಂದಿಸದ ಆರೋಪವೂ ಕೇಳಿಬಂದಿದೆ. ಆದರೆ ಮೊಬೈಲ್ ಶೋ ರೂಂ ಗಮನಕ್ಕೆ ಬರುತ್ತಿದ್ದಂತೆ ಮೆಡಿಕಲ್ ವೆಚ್ಚದ ಜೊತೆಗೆ ಮೊಬೈಲ್ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ. ಇತ್ತ ಸರ್ಜರಿಗೆ ಬರೋಬ್ಬರಿ 4 ಲಕ್ಷ ರೂ. ಖರ್ಚು ಆಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರಿಂದ ಪೂರ್ಣ ಪ್ರಮಾಣದ ಬಿಲ್ ಭರಿಸುವಂತೆ ಗಾಯಾಳು ಪಟ್ಟು ಹಿಡಿದಿದ್ದಾರೆ ಎಂದು ವರದಿಯಾಗಿದೆ.