Breaking News

ಕಡತ ವಿಲೇವಾರಿ ಕಾರ್ಯವನ್ನು ಅಕ್ಟೋಬರ್  ನಲ್ಲಿ ಸವಾಲಾಗಿ ಸ್ವೀಕರಿಸಿದ ಅಧಿಕಾರಿಗಳು ಬೆಳಗಾವಿ ಜಿಲ್ಲೆಯನ್ನು 2ನೇ ಸ್ಥಾನಕ್ಕೆ ತರುವಲ್ಲಿ ಯಶಸ್ವಿ

Spread the love

ಬೆಳಗಾವಿ: ಕಳೆದ ಎರಡು ವರ್ಷಗಳಿಂದ ಉಂಟಾದ ಪ್ರವಾಹ ಹಾಗೂ ಕರೋನ ಸಂಕಷ್ಟದಿಂದ ಇಡೀ ಜಿಲ್ಲಾಡಳಿತ ಜನರ ರಕ್ಷಣೆ ಹಾಗೂ ಸ್ಥಳಾಂತರ ಕಾರ್ಯದ ಒತ್ತಡದಲ್ಲಿ ತೊಡಗಿತ್ತು. ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಎಂ.ಜಿ.ಹಿರೇಮಠರವರ ನೇತೃತ್ವದಲ್ಲಿ ಜಿಲ್ಲೆಯ ಅಧಿಕಾರಿಗಳ ಅವಿರತ ಶ್ರಮದಿಂದಾಗಿ ಸೆಪ್ಟಂಬರ್ ನಲ್ಲಿ   ಬಿಡುಗಡೆಗೊಳಿಸಿದ್ದ ಜಿಲ್ಲಾಡಳಿತಗಳ ಕಡತ ವಿಲೇವಾರಿ ರ್ಯಾಂಕಿಂಗ್‍ನಲ್ಲಿ 13ನೇ ಸ್ಥಾನದಲ್ಲಿದ್ದ ಬೆಳಗಾವಿ ಜಿಲ್ಲೆಯು 2ನೇ ಸ್ಥಾನವನ್ನು ಪಡೆದುಕೊಂಡಿದೆ.

ಈ ಸಂಬಂಧ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದ ಕಡತ ಹಾಗೂ ಪ್ರಕರಣಗಳ ವಿಲೇವಾರಿ ಕುರಿತು ಪ್ರತಿ ಮಂಗಳವಾರ ವಿಡೀಯೊ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಸೂಚಿಸಲಾಗುತ್ತಿತ್ತು. ಜಿಲ್ಲೆಯ ಅಧಿಕಾರಿಗಳ ಪರಿಶ್ರಮದಿಂದ 13ನೇ ಸ್ಥಾನಕ್ಕಿದ್ದ ಜಿಲ್ಲೆಯನ್ನು 2 ಸ್ಥಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ತ್ವರಿತ  ಕಡತ ಇತ್ಯರ್ಥ ಹಾಗೂ ವಿಲೇವಾರಿ ಮಾಡುವ ಮೂಲಕ ಕಂದಾಯ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿಸಲು ಶ್ರಮಿಸಲಾಗುವುದು ಎಂದು ಅವರು ಹೇಳಿದರು.

ಕಡತ ವಿಲೇವಾರಿ ಕಾರ್ಯವನ್ನು ಅಕ್ಟೋಬರ್  ನಲ್ಲಿ ಸವಾಲಾಗಿ ಸ್ವೀಕರಿಸಿದ ಅಧಿಕಾರಿಗಳು ಬೆಳಗಾವಿ ಜಿಲ್ಲೆಯನ್ನು 2ನೇ ಸ್ಥಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಕಂದಾಯ ಇಲಾಖೆ ಬಿಡುಗಡೆಗೊಳಿಸಿದ ರ್ಯಾಂಕಿಂಗ್ ಪ್ರಕಾರ ಉಡುಪಿ ಮೊದಲನೇ ಸ್ಥಾನವನ್ನು ಪಡೆದುಕೊಂಡರೆ, ಬೆಳಗಾವಿ 2ನೇ ಸ್ಥಾನ, ಬಳ್ಳಾರಿ3, ದಾವಣಗೆರೆ 4, ಗದಗ 5ನೇ ಸ್ಥಾನವನ್ನು ಪಡೆದುಕೊಂಡಿದೆ.  


Spread the love

About Laxminews 24x7

Check Also

ಪಿ ರಾಜೀವ್ ಅವರೇ ಲೋಕಾಯುಕ್ತ ತನಿಖೆ ಯಾವಾಗ? : ರಮೇಶ ಯಡವನ್ನವರ

Spread the love ಚಿಕ್ಕೋಡಿ : ಪಿ ರಾಜೀವ್ ಅವರೇ ಲೋಕಾಯುಕ್ತ ತನಿಖೆ ಯಾವಾಗ? : ರಮೇಶ ಯಡವನ್ನವರ ರಾಯಬಾಗ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ