Breaking News

ಬಿಹಾರದಲ್ಲಿ ಎನ್‍ಡಿಎ ಗೆಲುವಿಗೆ ಕಾರಣವೇನು..?- ಮಹಾಘಟ್‍ಬಂಧನ್ ಎಡವಿದ್ದೆಲ್ಲಿ..?

Spread the love

ಪಾಟ್ನಾ: ಭಾರೀ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹೊರಬಿದ್ದಿದೆ. ಕೊನೆಗೂ ಎನ್‍ಡಿಎ ಮೈತ್ರಿಕೂಟ ಭರ್ಜರಿಯಾಗಿ ಗೆಲುವು ಕಂಡಿತು.

ಎನ್‍ಡಿಎ ಗೆಲುವಿಗೆ ಕಾರಣ…?
ಪ್ರಧಾನಿ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ಜೋಡಿಗೆ ಜನ ಮನ್ನಣೆ ನೀಡಿದ್ದಾರೆ. ಮೋದಿ ರ್ಯಾಲಿಗಳು ದೊಡ್ಡ ಪ್ರಮಾಣದಲ್ಲಿ ಸಕ್ಸಸ್ ಕಂಡಿವೆ. ಕೊರೊನಾ ವ್ಯಾಕ್ಸಿನ್ ಫ್ರೀ ಹಂಚುವ ಭರವಸೆಗೆ ಜನ ಬೆಂಬಲ ಸೂಚಿಸಿದ್ದಾರೆ. ಆರ್‍ಜೆಡಿಗೆ ಅಧಿಕಾರ ಕೊಟ್ಟರೆ ಜಂಗಲ್ ರಾಜ್ ಮಾಡ್ತಾರೆ ಅನ್ನೋ ಮೋದಿ ರಾಜಕೀಯ ಅಸ್ತ್ರ ವರ್ಕೌಟ್ ಆಗಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿರುವುದು ಕೂಡ ಗೆಲುವಿಗೆ ಕಾರಣ. ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಾದ ಉಜ್ವಲ ಯೋಜನೆ, ಕಿಸಾನ್ ಸಮ್ಮಾನ್, ಲಾಕ್‍ಡೌನ್ ಅವಧಿಯಲ್ಲಿ ಉಚಿತ ಪಡಿತರ ಸಕ್ಸಸ್ ಕಂಡಿದೆ. ಆರ್‍ಜೆಡಿ ಅಬ್ಬರದ ಪ್ರಚಾರ ಮಾಡ್ತಿದ್ರೆ ಬಿಜೆಪಿ ಮನೆ ಮನೆ ತಲುಪುವ ಕೆಲಸ ಮಾಡಿದ್ದು ಕೂಡ ಇಲ್ಲಿ ಎನ್‍ಡಿಎಗೆ ಲಾಭವಾಗಿದೆ.

ಎಐಎಂಐಎಂ ಸ್ಪರ್ಧೆಯಿಂದ ಮುಸ್ಲಿಂ ಮತಗಳು ವಿಭಜನೆಯಾಗಿರುವುದು ಕೂಡ ಲಾಭವಾಗಿದ್ದು, ಲಾಲೂ ಕುಟುಂಬದ ಭ್ರಷ್ಟಾಚಾರ ಹಾಗೂ ತೇಜಸ್ವಿಗೆ ಅನನುಭವ ಹಿನ್ನೆಲೆ ಎನ್‍ಡಿಎಗೆ ಮತದಾರರು ಬೆಂಬ ಸೂಚಿಸಿದ್ದಾರೆ. ಇದನ್ನೂ ಓದಿ: ಎನ್‍ಡಿಎ ಮೈತ್ರಿಕೂಟಕ್ಕೆ ಮತ್ತೆ ಬಿಹಾರ – ನಿತೀಶ್‍ಗೆ ಒಲಿದ ಸಿಎಂ ಪಟ್ಟ

ಮಹಾಘಟಬಂಧನ್ ಹಿನ್ನಡೆಗೆ ಕಾರಣ..?
ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನ ನೀಡಿ ತಾನು ಗೆಲ್ಲುವ ಕ್ಷೇತ್ರಗಳನ್ನು ಆರ್‌ಜೆಡಿ ಬಿಟ್ಟುಕೊಟ್ಟಿರುವುದು. ಎಐಎಂಐಎಂ ಮಹಾಘಟಬಂಧನ್‍ಗೆ ಸೇರಿಕೊಳ್ಳದಿರುವುದು. ಎಐಎಂಐಎಂ ಪ್ರತ್ಯೇಕ ಸ್ಪರ್ಧೆಯಿಂದ ಮುಸ್ಲಿಂ ಮತಗಳು ಛಿದ್ರವಾಗಿದ್ದು, ಮಹಾಘಟಬಂಧನ್, ವಿಐಪಿ ಮತ್ತು ಹೆಚ್‍ಎಎಂ ಪಕ್ಷಗಳನ್ನು ಎನ್‍ಡಿಎಗೆ ಬಿಟ್ಟುಕೊಟ್ಟಿದ್ದು ಕೂಡ ಹಿನ್ನಡೆಗೆ ಕಾರಣವಾಗಿದೆ.

ಇಷ್ಟು ಮಾತ್ರವಲ್ಲದೆ ತೇಜಸ್ವಿ, ರಾಹುಲ್ ರ್ಯಾಲಿಗಳಲ್ಲಿ ಸೇರಿದ ಜನಸಂಖ್ಯೆ ಮತಗಳಾಗಿ ಬದಲಾಗಿಲ್ಲ. ತೇಜಸ್ವಿ ಯಾದವ್ ಕೊಟ್ಟ ಉದ್ಯೋಗ ಸೃಷ್ಟಿ ಭರವಸೆಯನ್ನು ಮತದಾರ ನಂಬದಿರಬಹುದು. ಎನ್‍ಡಿಎ ಸರ್ಕಾರದ ವೈಫಲ್ಯವನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸದೇ ಇರುವುದು. ಕೇಂದ್ರದಲ್ಲಿ ಮೋದಿ ಸರ್ಕಾರ ಹಿನ್ನೆಲೆ ಅಭಿವೃದ್ಧಿ ಕಾರಣಕ್ಕೆ ಎನ್‍ಡಿಎಗೆ ಬೆಂಬಲ ಸಾಧ್ಯತೆ ಇದೆ.

ತೇಜಸ್ವಿ ಯಾದವ್ ವಯಸ್ಸು ಕಡಿಮೆ ಮತ್ತು ಅನನುಭವ ಇರುವುದು ಕೂಡ ಕಾರಣವಾಗಿರಬಹುದು. ರಾಜಕೀಯ ತಂತ್ರಗಳ ಕೊರತೆಯಿಂದ ಮಹಾಘಟಬಂಧನ್ ಒಕ್ಕೂಟಕ್ಕೆ ಹಿನ್ನಡೆ ಹಾಗೂ ಮಹಿಳೆಯರ ಮತಗಳು ಹೆಚ್ಚು ಜೆಡಿಯು ಪಾಲಾಗಿದ್ದು ಮಹಾಘಟಬಂಧನ್ ಸೋಲನುಭವಿಸಲು ಕಾರಣಬಾಗಿರಬಹುದು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ