Breaking News

7 ದಿನ ಹೋಂ ಐಸೊಲೇಷನ್‌ ಕಡ್ಡಾಯ!

Spread the love

ಬೆಂಗಳೂರು : ರಾಜ್ಯದಲ್ಲಿ ಕೋವಿಡ್‌ ಆತಂಕ(covid cases) ಇರುವ ಹಿನ್ನೆಲೆ ಹೊಸ ವರ್ಷ(New year celebration) ಆಚರಣೆಯಲ್ಲಿ ಅಧಿಕ ಜಾಗ್ರತೆ ವಹಿಸುವಂತೆ ಈಗಾಗಲೇ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಜೊತೆಗೆ ಕೋವಿಡ್‌ ಸೋಂಕಿತ ವ್ಯಕ್ತಿಗಳಿಗೆ ಕೆಲವು ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಲಾಗಿದೆ.

 

ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೊರೊನಾ ಸೋಂಕಿತ ವ್ಯಕ್ತಿಗಳು ಕಡ್ಡಾಯವಾಗಿ 7 ದಿನ ಹೋಂ ಐಸೊಲೇಷನ್‌ ನಲ್ಲಿ ಇರುವಂತೆ, ಹಾಗೆ ಮಾಸ್ಕ್‌ ಬಳಕೆ ಸೇರಿದಂತೆ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ. ಕೋವಿಡ್‌ ಸಂಬಂಧಿತ ಸಭೆ ಬಳಿಕ ಮಾತನಾಡಿದ ಅವರು ಹೊಸ ವರ್ಷಕ್ಕೆ ಯಾವುದೇ ನಿರ್ಬಂಧ ಇಲ್ಲ ಆದರೆ ಜನರೇ ಹೆಚ್ಚು ದಟ್ಟಣೆ ಇರುವ ಜಾಗದಲ್ಲಿ ಸೇರದೇ ಇರುವಂತೆ ಜಾಗೃತೆ ವಹಿಸಿ . ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಂಡರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ , ಉದ್ಯೋಗಿಗಳಿಗೂ ಕಡ್ಡಾಯ ರಜೆ ನೀಡಿ ಎಂದು ಸೂಚನೆ ನೀಡಿದ್ದಾರೆ.

ಹೊರಗಡೆ ಓಡಾಡುವಾಗ ಮಾಸ್ಕ್‌ ಧರಿಸಿ, ಶುಚಿತ್ವ ಕಾಪಾಡಿಕೊಳ್ಳಿ , ರೋಗ ಲಕ್ಷಣಗಳನ್ನು ಕಡೆಗಣಿಸಬೇಡಿ. ಜೆಎನ್‌.1 ಉಪತಳಿ ರಾಜ್ಯದಲ್ಲಿ ಹರಡುವ ಆತಂಕ ಹೆಚ್ಚಿದೆ. ಈಗಾಗಲೇ ಟೆಸ್ಟಿಂಗ್‌ ಹೆಚ್ಚಿಸಿದ್ದು 436 ಪಾಸಿಟಿವ್‌ ಪ್ರಕರಣದಗಳು ರಾಜ್ಯದಲ್ಲಿ ಇದೆ. ಹೆಚ್ಚುವರಿ ಆಕ್ಸಿಜನ್‌ ಕಂಟೈನರ್‌ , ವ್ಯಾಕ್ಸಿನ್‌ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಸಚಿವರು ಈ ವೇಳೆ ಹೇಳಿದರು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ