ಬೆಂಗಳೂರು : ಕಾಂಗ್ರೆಸ್ ಸರ್ಕಾರ(Congress government) ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಯುವನಿಧಿ ಗೆ(Yuvanidhi) ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಜೆಡಿಎಸ್ ಮತ್ತು ಬಿಜೆಪಿಗೆ ಕವನ ವಾಚನದ ಮೂಲಕ ಭರ್ಜರಿ ಟಾಂಗ್ ನೀಡಿದ್ದಾರೆ.
” ಐದು ಬೆರಳು ಸೇರಿ ಒಂದು ಮುಷ್ಠಿಯಾಯಿತು,
ಅರಳಿದ ಕಮಲದ ಹೂವು ಇದನ್ನು ನೋಡಿ ಉದುರಿ ಹೋಯಿತು,
ಐದು ಗ್ಯಾರೆಂಟಿ ನೋಡಿ ಮಹಿಳೆ ತಾನು ಹೊತ್ತ ತೆನೆ ಎಸೆದು ಗೋದಳು
ಐದು ಗ್ಯಾರೆಂಟಿ ಸೇರಿ ಕೈ ಗಟ್ಟಿಯಾಯಿತು”
ಎನ್ನುವ ಮೂಲಕ ಕಾರ್ಯಕ್ರಮದಲ್ಲಿ ಡಿಸಿಎಂ ವಿರೋಧ ಪಕ್ಷಗಳ ಕಾಲೆಳೆದಿದ್ದಾರೆ. ಮುಂದುವರೆದು ಮಾತನಾಡಿದ ಅವರು ಈ ಯೋಜನೆ ನನಗೆ ಅತಿ ಹೆಚ್ಚು ಖುಷಿ ಕೊಟ್ಟಿದೆ. ಯಾಕೆಂದರೆ ನನಗೂ ಸಿದ್ದರಾಮಯ್ಯ ಅವರಿಗೂ ಇಂತಹ ಭಾಗ್ಯ ಇರಲಿಲ್ಲ. ನಾನು ಯಾವಾಗಲೂ ಮಹಿಲೆಯರು, ಯುವಕರ ಮೇಲೆ ನಂಬಿಕೆ ಇಡಬೇಕು ಎಂದು ಹೇಳುತ್ತಿದ್ದೆ. ಬಿಜೆಪಿ 2 ಕೋಟಿ ಉದ್ಯೋಗ ನೀಡುತ್ತೇವೆ, 15 ಲಕ್ಷ ರೂ ಖಾತೆಗೆ ಹಾಕುತ್ತೇವೆ ಎಂದು ಹೇಳಿದ್ದರು ಆದರೆ ಮಾಡಲಿಲ್ಲ . ಆದರೆ ನಾವು ಎಲ್ಲರ ಕುಟುಂಬಗಳ ನೆರವಿಗೆ ಯೋಜನೆ ಜಾರಿ ಮಾಡಿದ್ದೇವೆ ಎಂದರು.
ಮಲೆ ಮಹದೇಶ್ವರ ಬೆಟ್ಟಕ್ಕೆ ಯುವಕರು ಕೆಲಸ ಇಲ್ಲ ಎಂದು ಬೇಡಿಕೊಳ್ಳಲು ಹೋಗುತ್ತಿದ್ದರು , ಅದಕ್ಕಾಗಿ ಈ ಯೋಜನೆ ಜಾರಿ ಮಾಡಿದ್ದೇವೆ , ಯಾರು ಮನೆಯ ಜ್ಯೋತಿ ಬೆಳಗುತ್ತಾರೋ ಅವರನ್ನು ಮರೆಯಬಾರದು , ಯುವಕರು ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು ಜೊತೆಗೆ ಯಾರೂ ಕೂಡ ಯುವನಿಧಿ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಮನವಿ ಕೂಡ ಮಾಡಿದರು