ವಿಜಯಪುರ: ಪಕ್ಷವನ್ನು ಯಡಿಯೂರಪ್ಪ (BS Yediyurappa) ಕುಟುಂಬಕ್ಕೆ ರಿಜಿಸ್ಟರ್ ಮಾಡಿದ್ದಾರೆ ಎಂದು ಪರೋಕ್ಷವಾಗಿ ಹೈಕಮಾಂಡ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ (Karnataka) ಬಿಜೆಪಿಯನ್ನು (BJP) ಯಡಿಯೂರಪ್ಪಗೆ ಕೊಟ್ಟಿದ್ದಾರೆ.
ಪಕ್ಷವನ್ನು ಯಡಿಯೂರಪ್ಪ ಕುಟುಂಬಕ್ಕೆ ರಿಜಿಸ್ಟರ್ ಮಾಡಿದ್ದಾರೆ. ಬೆಂಗಳೂರಿನ ಕಚೇರಿಯಲ್ಲಿ ರಿಜಿಸ್ಟ್ರಾರ್ ಮಾಡಿಸಿದ್ದಾರೆ ಎಂದರು.
ಅಧಿವೇಶನದಲ್ಲಿ ಬಿಜೆಪಿ ಗಮನ ಸೆಳೆಯಲಿಲ್ಲ. ಇದು ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್. ಎಲ್ಲವೂ ಹೊಂದಾಣಿಕೆ, ಚುನಾವಣೆಯಲ್ಲೂ ಹೊಂದಾಣಿಕೆ, ಆ ಜೋಡೆತ್ತುಗಳು ಈ ಜೋಡೆತ್ತುಗಳಿಗೆ ಹೇಳಿವೆ. ನೀ ಒಂದು ತೆಗೆದ್ರೆ ನಿಮ್ಮವು ನೂರು ತೆಗೆಯುತ್ತೇವೆಂದಿದ್ದಾರೆ ಎಂದು ಎಂದು ಗಂಭೀರ ಆರೋಪ ಮಾಡಿದರು.
ಈ ಹಿಂದೆ ನಳೀನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾದ ಸಂದರಭದಲ್ಲೂ ಸಹ ಯತ್ನಾಳ್ ಯಡಿಯೂರಪ್ಪ ಹಾಗೂ ಅವರ ಬಣ ವಿರುದ್ಧ ಗುಡುಗಿದ್ದರು. ಇದೀಗ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ ಯತ್ನಾಳ್ ಮತ್ತೇ ಮಾತಿನ ವರಸೆ ಮತ್ತಷ್ಟು ಹೆಚ್ಚು ಮಾಡಿದ್ದಾರೆ.