Breaking News

ಫ್ಯ್ಲಾಟ್‌ ನಿರ್ಮಿಸಿಕೊಡದ ಬಿಲ್ಡರ್‌! ಧಾರವಾಡ ಗ್ರಾಹಕರ ಆಯೋಗದ ಆದೇಶವೇನು?

Spread the love

ನಿಗದಿತ ಅವಧಿಯಲ್ಲಿ ಫ್ಯ್ಲಾಟ್‌ ನಿರ್ಮಿಸಿಕೊಡದ ಬಿಲ್ಡರ್‌ಗೆ ಧಾರವಾಡದ ಗ್ರಾಹಕರ ಆಯೋಗ ಕರಾರಿನಂತೆ ಪ್ರತಿ ತಿಂಗಳು ರು. 10 ಸಾವಿರ ಬಾಡಿಗೆ ನೀಡುವಂತೆ ಆದೇಶ ನೀಡಿದೆ.ಧಾರವಾಡದ ಸಂಜೀವ ದೇಸಾಯಿ ಎಂಬುವವರು (consumer) 2017ರಲ್ಲಿ ಸ್ಕೈಟೌನ್‌ ಬಿಲ್ಡರ್ಸ್‌ ಮತ್ತು ಡೆವೆಲಪರ್ಸ್‌ ಬಳಿ ಪೂರ್ತಿ ಹಣ ಪಾವತಿಸಿ ಫ್ಲ್ಟಾಟ್‌ (Flat) ಖರೀದಿಸಿದ್ದರು.

ಖರೀದಿ ಕರಾರಿನಂತೆ 24 ತಿಂಗಳೊಳಗೆ ಮನೆಯನ್ನು ಪೂರ್ಣಗೊಳಿಸಿ ಕೊಡಬೇಕು. ತಪ್ಪಿದ್ದಲ್ಲಿ ಪ್ರತಿ ತಿಂಗಳು ರೂ.10 ಸಾವಿರ ಮನೆ ಬಾಡಿಗೆಯನ್ನು ಪೂರ್ತಿ ಮನೆ ಕಟ್ಟುವವರೆಗೂ ಕೊಡಬೇಕಿತ್ತು. ನಿಗದಿತ ಅವಧಿಯೊಳಗೆ ಮನೆಯನ್ನು ನಿರ್ಮಿಸಿಕೊಡದೇ, ಇತ್ತ ಪ್ರತಿ ತಿಂಗಳು ಬಾಡಿಗೆಯನ್ನು ಕೊಡದ ಕಾರಣ ಸಂಜೀವ ಅವರು ಸೇವಾ ನ್ಯೂನ್ಯತೆ ಆಧಾರದ ಮೇಲೆ ಧಾರವಾಡ ಗ್ರಾಹಕರ ಆಯೋಗದ (Dharwad Consumer Commission ) ಬಾಗಿಲು ಬಡಿದಿದ್ದರು.

ಈ ದೂರು ಪರಿಶೀಲಿಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರು, ಕರಾರಿನಂತೆ ಮನೆ ನಿರ್ಮಿಸಿಕೊಡುವುದು ಹಾಗೂ ತಪ್ಪಿದಲ್ಲಿ ಪ್ರತಿ ತಿಂಗಳು ಬಾಡಿಗೆಯನ್ನೂ ಕೊಡದ ಬಿಲ್ಡರ್‌ಗೆ ತರಾಟೆಗೆ ತೆಗೆದುಕೊಂಡು, 2019ರ ನವೆಂಬರ್‌ ತಿಂಗಳಿಂದ 2023ರ ನವೆಂಬರ್‌ ವರೆಗೆ ಬಾಡಿಗೆ ಹಣ ರೂ. 4.90 ಲಕ್ಷಗಳನ್ನು ದೂರುದಾರರಿಗೆ ನೀಡಬೇಕು.

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಸ್ಕೈಟೌನ್‌ ಬಿಲ್ಡರ್‌ಗೆ ಹಾಗೂ ಮನೆ ನಿರ್ಮಿಸಿ ಕೊಡುವುವವರೆಗೂ ತಿಂಗಳಿಗೆ ರೂ.10 ಸಾವಿರದಂತೆ ಬಾಡಿಗೆ ಕೊಡಬೇಕು. ಜೊತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ. 25 ಸಾವಿರ, ಪ್ರಕರಣದ ಖರ್ಚು ವೆಚ್ಚವೆಂದು ರೂ. 10 ಸಾವಿರ ಕೊಡಲು ಆದೇಶಿಸಿದೆ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ