ಬೆಂಗಳೂರು-1, ದಕ್ಷಿಣ ಕನ್ನಡ-1, ಹಾಸನ ಜಿಲ್ಲೆಯಲ್ಲಿ ಒಬ್ಬರು ಕೊನೆಯುಸಿರೆಳೆದಿದ್ದಾರೆ. ಇನ್ನು ಬೆಂಗಳೂರಿನಲ್ಲಿಯೇ ಇಂದು 94 ಜನರಲ್ಲಿಕೊರೊನಾ ಸೋಂಕುಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸಕ್ರಿಯ ಕೇಸ್ಗಳ ಸಂಖ್ಯೆ 436 ಕ್ಕೆ ಏರಿಕೆಯಾಗಿದೆ. ಜೊತೆಗೆ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 3.96ರಷ್ಟಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಕೊರೊನಾ ಸೋಂಕು ಪತ್ತೆ
ಇನ್ನು ರಾಜ್ಯದಲ್ಲಿಂದು 125 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ದಕ್ಷಿಣ ಕನ್ನಡ-5, ಹಾಸನ-5, ಮೈಸೂರು-13, ಶಿವಮೊಗ್ಗ-2, ವಿಜಯಪುರ-2, ದಾವಣಗೆರೆ, ಚಿಕ್ಕಮಗಳೂರು, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಲ್ಲಿ ವೈರಸ್ ಪತ್ತೆಯಾಗಿದೆ.
ನಿನ್ನೆ ಇದ್ದ ಕೊರೊನಾ ಕೇಸ್
ಇನ್ನು ನಿನ್ನೆ ರಾಜ್ಯದಲ್ಲಿ ಇಂದು 106 ಜನರಿಗೆ ಹೊಸದಾಗಿ ಕೊರೊನಾ ಸೋಂಕು ಬೆಳಕಿಗೆ ಬಂದಿತ್ತು. ಅದರಲ್ಲಿ ಬೆಂಗಳೂರಿನಲ್ಲಿಯೇ ಬರೊಬ್ಬರಿ 95 ಜನರಿಗೆ ಹರಡಿತ್ತು. ಇನ್ನುಳಿದಂತೆ ಮೈಸೂರು 6, ದಕ್ಷಿಣ ಕನ್ನಡ ಇಬ್ಬರಿಗೆ ಹಾಗೂ ಮಂಡ್ಯ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಕೊರೊನಾ ಸೋಂಕು ಕಂಡುಬಂದಿತ್ತು. ಆ ಮೂಲಕ ಕರ್ನಾಟಕದಲ್ಲಿ 344 ಕೊರೊನಾ ಸಕ್ರಿಯ ಕೇಸ್ಗಳಿತ್ತು. ಜೊತೆಗೆ ರಾಜ್ಯದಲ್ಲಿ ಕೊರೊನಾ ಪಾಸಿಟಿವಿ ರೇಟ್ ಶೇಕಡಾ 7.35ರಷ್ಟಿತ್ತು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ತಿಳಿಸಿತ್ತು