ಬೆಂಗಳೂರು, ಡಿ.25: ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಬಳಸಿದ ವಸ್ತು ಸ್ವಚ್ಛಗೊಳಿಸಿ ಮರುಬಳಕೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನಲೆಕನ್ನಡ ಪರ ಸಂಘಟನೆಸದಸ್ಯರು ದಾಳಿ ಮಾಡಿ ಮೆಡಿಕಲ್ ತ್ಯಾಜ್ಯ(Medical waste)ತುಂಬಿದ ಲಾರಿಯನ್ನು ಬೆಂಗಳೂರಿನ ಪೀಣ್ಯ(Peenya) ಕೈಗಾರಿಕಾ ಪ್ರದೇಶದಲ್ಲಿ ತಡೆದಿದ್ದಾರೆ.
ರೋಗಿಗಳಿಗೆ ಬಳಕೆಯಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಲಿಂಗಪುರದಲ್ಲಿ ಡಂಪಿಂಗ್ ಮಾಡಿ, ಪುನಃ ಅದನ್ನೇ ಕ್ಲೀನ್ ಮಾಡಿ ಲಾರಿಗೆ ತುಂಬಿಸಿ ಆಸ್ಪತ್ರೆಗೆ ಕಳುಹಿಸುವ ಉತ್ತರ ಭಾರತದ ಯುವಕರ ಲಾರಿಯನ್ನು ತಡೆದು ಕೂಡಲೇ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.
Laxmi News 24×7