ಬೆಳಗಾವಿ, ಡಿ.25: ಬರಗಾಲ ಬರಲಿ ಎಂದು ರೈತರಿಗೆ ಆಸೆ ಎಂಬ ಸಕ್ಕರೆ ಸಚಿವ ಶಿವಾನಂದ ಪಾಟೀಲ್( Shivanand Patil ) ಹೇಳಿಕೆಗೆ ‘ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ರೈತ ಮುಖಂಡ ಮಹಾದೇವ ಮಡಿವಾಳ ಹಾಗೂ ಮಂಜುನಾಥಪರಗೌಡ ಮಾತನಾಡಿ‘ನೀವು ರೈತನ ಮಕ್ಕಳು ಎಂದು ಚುನಾವಣೆ ಸಂದರ್ಭದಲ್ಲಿ ಹೇಳುತ್ತೀರಿ, ನೀವು ರೈತರ ಮಕ್ಕಳಲ್ಲ, ಬರಗಾಲ ಬರಲಿ ಎಂದು ನಿಮ್ಮ ತಂದೆ ಬಯಸಿದ್ರಾ ಎಂದು ಕೇಳಿಕೊಳ್ಳಿ ಎಂದು ಕಿಡಿಕಾರಿದ್ದಾರೆ.
ಉಡಾಫೆ ಹೇಳಿಕೆ ಕೊಟ್ರೆ ತಕ್ಕ ಪಾಠ ಕಲಿಸುತ್ತೇವೆ ಎಂದ ಮುಖಂಡರು
ದೇವರು ಕೊಟ್ಟ ಕೃಷ್ಣ ನದಿ ಪುಕ್ಕಟ್ಟೆ ಎಂದು ಹೇಳುತ್ತೀರಾ, ಮಹಾರಾಷ್ಟ್ರದಿಂದ ನೀರು ಬಿಡುಗಡೆ ಮಾಡಿಸಿಕೊಂಡು ಬರುವ ತಾಕತ್ ನಿಮಗೆ ಇಲ್ಲ. ಇಂತಹ ಉಡಾಫೆ ಹೇಳಿಕೆ ಕೊಟ್ಟರೆ ತಕ್ಕ ಪಾಠ ಕಲಿಸುತ್ತೇವೆ. ನೀವು ಎಂಎಲ್‌ಎ ಎಲೆಕ್ಷನ್‌ಗೆ ನಿಲ್ಲು ಎಂದು ಯಾರಾದರೂ ಹೇಳ್ತಾರಾ?, ನಮ್ಮಿಂದ ನೀವು, ನಿಮ್ಮಿಂದ ನಾವಲ್ಲ. ಹೇಳಿಕೆ ಹಿಂದೆ ತಗೆದುಕೊಳ್ಳದಿದ್ರೆ ಉಗ್ರ ಹೋರಾಟ ಮಾಡ್ತೀವಿ ಎಂದು ರೈತ ಮುಖಂಡ ಮಹಾದೇವ ಮಡಿವಾಳ ವಾರ್ನ್ ಕೊಟ್ಟಿದ್ದಾರೆ.