ಬೆಳಗಾವಿ, ಡಿ.23: ಜಿಲ್ಲೆಯ ರಾಯಬಾಗ (Raybag) ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್(tractor) ಪಲ್ಟಿಯಾಗಿ, ಟ್ರ್ಯಾಕ್ಟರ್ ಕೆಳಗಡೆ ಸಿಲುಕಿ ಪರದಾಡುತ್ತಿದ್ದ ಚಾಲಕ(Driver)ನನ್ನು ರಕ್ಷಣೆ ಮಾಡಲಾಗಿದೆ.
4 ಜೆಸಿಬಿ, 1 ಹಿಟಾಚಿ ಸಹಾಯದಿಂದ ಚಾಲಕನನ್ನು ರಕ್ಷಿಸಲಾಗಿದ್ದು, ಕೂಡಲೇ ಸ್ಥಳೀಯರು ಟ್ರ್ಯಾಕ್ಟರ್ ಚಾಲಕನನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.