Breaking News

ವ್ಯಕ್ತಿಯ ಹೊಟ್ಟೆಯಲ್ಲಿತ್ತು 99 ಕೊಕೇನ್ ಕ್ಯಾಪ್ಸುಲ್!

Spread the love

Cocaine smuggling: ಬೆಂಗಳೂರು ಡಿಆರ್‌ಐ ಅಧಿಕಾರಿಗಳು ಅತಿದೊಡ್ಡ ಕೊಕೇನ್ ಕಳ್ಳಸಾಗಣೆ ಭೇದಿಸಿದ್ದು, ಕಳ್ಳಸಾಗಾಣಿಕೆದಾರನ ಹೊಟ್ಟೆಯಲ್ಲಿದ್ದ 99 ಕೊಕೇನ್ ಕ್ಯಾಪ್ಸುಲ್ ವಶಕ್ಕೆ ಪಡೆದಿದ್ದಾರೆ.

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣ ಮೂಲಕ ಸುಮಾರು 20 ಕೋಟಿ ರೂಪಾಯಿ ಮೌಲ್ಯದ 2 ಕೆ.ಜಿ ಕೋಕೆನ್ ಕ್ಯಾಪ್ಸುಲ್ ಸಾಗಿಸುತ್ತಿದ್ದ ನೈಜಿರಿಯಾ ಮೂಲದ‌ ಪ್ರಯಾಣಿಕನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಬೆಂಗಳೂರು ಘಟಕದ (Directorate of Revenue Intelligence) ಅಧಿಕಾರಿಗಳು ಬಂಧಿಸಿದ್ದಾರೆ.

 

ಫ್ಲೈ ಇಥಿಯೋಪಿಯಾ ವಿಮಾನದಲ್ಲಿ ಕೋಕೆನ್‌ ಸಾಗಿಸುತ್ತಿರುವ ಖಚಿತ ಮಾಹಿತಿ‌ ಆಧರಿಸಿ ಗುಪ್ತಚರ ಅಧಿಕಾರಿಗಳು ನೈಜಿರಿಯಾ ಪ್ರಜೆಯನ್ನು ತಪಾಸಣೆ ನಡೆಸಿದ್ದಾರೆ. ಸುಮಾರು 40 ವರ್ಷ ವಯಸ್ಸಿನ ಆರೋಪಿಯು ತನ್ನ ಹೊಟ್ಟೆಯೊಳಗೆ 2 ಕೆ.ಜಿ ತೂಕದ 99 ಕೊಕೇನ್ ಕ್ಯಾಪ್ಸುಲ್ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ. ಈತ ನೈಜೀರಿಯನ್ ಪಾಸ್‌ಪೋರ್ಟ್ ಹೊಂದಿದ್ದು, ವೈದ್ಯಕೀಯ ವೀಸಾದಲ್ಲಿ ಭಾರತಕ್ಕೆ ಬಂದಿದ್ದ. ಆರೋಪಿಯನ್ನು ಬಂಧಿಸಿ‌, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ