ಹೈದರಾಬಾದ್ : ಕೋವಿಡ್ 19 ಉಪತಳಿಯಾಗಿರುವ ಜೆಎನ್.1 (JN.1) ಸದ್ಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಜೆಎನ್.
1 ತಳಿಯನ್ನು ಬಿಎ.2.68 ವಂಶವಾಹಿನಿ ವೆರಿಯೆಂಟ್ ಆಫ್ ಇಂಟ್ರೆಸ್ಟ್ (ರೂಪಾಂತರ ತಳಿ) ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಈ ಹಿಂದೆ ಬಿಎ.2.86 ಉಪವರ್ಗಗಳ ಭಾಗದ ರೂಪಾಂತರ ತಳಿ ಎಂದು ವರ್ಗೀಕರಿಸಲಾಗಿದೆ.
ಲಭ್ಯವಿರುವ ಸಾಕ್ಷಿಗಳ ಆಧಾರದ ಮೇಲೆ ಪ್ರಸ್ತುತ ಹೊರ ಹೊಮ್ಮಿರುವ ಜೆಎನ್ 1ತಳಿ ಕಡಿಮೆ ಸಾರ್ವಜನಿಕ ಆರೋಗ್ಯ ಅಪಾಯವನ್ನು ಹೊಂದಿದೆ. ಇದರ ಹೊರತಾಗಿ, ಉತ್ತರಾರ್ಧ ಗೋಳದಲ್ಲಿ ಚಳಿ ಪ್ರಮಾಣ ಹೆಚ್ಚಿದ್ದು, ಇದು ಅನೇಕ ದೇಶಗಳಲ್ಲಿ ಶ್ವಾಸಕೋಶ ಸೋಂಕಿನ ಅಪಾಯವನ್ನು ಹೆಚ್ಚಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವೈರಸ್ನಿಂದ ರಕ್ಷಣೆಗೆ ದೇಶಗಳು ಲಸಿಕೆಯನ್ನು ಮುಂದುವರೆಸುವ ಮೂಲಕ ಗಂಭೀರ ರೋಗ ಮತ್ತು ಸಾವಿನಿಂದ ರಕ್ಷಿಸಬಹುದಾಗಿದೆ. ಅಲ್ಲದೇ ವಿಶ್ವ ಸಂಸ್ಥೆ ಜೆಎನ್.1 ಮೇಲೆ ನಿರಂತರ ನಿಗಾ ಇರಿಸಿದ್ದು, ಈ ಕುರಿತು ಮುನ್ನೆಚ್ಚರಿಕೆ ವಹಿಸಲಾಗುವುದು ಎಂದಿದೆ.