ಬೆಂಗಳೂರು : ಹುಲಿ ಉಗುರು ವಿವಾದದ (Tiger claw controversy) ಬಳಿಕ ರಾಜ್ಯ ಸರ್ಕಾರ ವನ್ಯಜೀವಿ ಅಂಗಾಂಗಗಳನ್ನು ಹಿಂದಿರುಗಿಸಲು ಸಾರ್ವಜನಿಕರಿಗೆ ಕೊನೆಯ ಅವಕಾಶ ನೀಡಲು ಚಿಂತನೆ ನಡೆಸಿದೆ. ಈ ಕುರಿತು ಅರಣ್ಯ ಇಲಾಖೆ (Forest department) ಸಚಿವ ಈಶ್ವರ ಖಂಡ್ರೆ (Eshwar Khandre) ಎ.ಜಿ.
ಶಶಿಕಿರಣ್ ಶೆಟ್ಟಿ ನೇತೃತ್ವದ ಅಧಿಕಾರಿಗಳೊಡನೆ ಚರ್ಚೆ ನಡೆಸಿದ್ದಾರೆ.
ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಸಾರ್ವಜನಿಕರು ತಮ್ಮ ಬಳಿ ಅಂಥಾ ವಸ್ತುಗಳನ್ನು ಹೊಂದಿದ್ದರೆ, ಕೂಡಲೇ ಅರಣ್ಯ ಇಲಾಖೆಗೆ ಒಪ್ಪಿಸಿ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು ಎಂದು ಇಲಾಖೆ ಹೇಳಿದೆ.
ಜನರ ಬಳಿಯಿರುವ ಸಂಗ್ರಹವು ಅಕ್ರಮ ಎಂದು ಸಾಬೀತಾದರೆ ಮೂರು ವರ್ಷದಿಂದ ಏಳು ವರ್ಷಗಳ ವರೆಗೆ ಜೈಲು ಮತ್ತು ಕನಿಷ್ಠ 10 ಸಾವಿರ ರೂ. ದಂಡ ವಿಧಿಸಬಹುದಾಗಿದೆ.