ಲಕ್ನೋ: ಸೆಕ್ಸ್ ದಂಧೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ 10 ಜನರನ್ನ ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಅಬ್ದುಲಪುರವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇಹಾತ್ ಗ್ರಾಮದಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಸೋಮವಾರ ತಡರಾತ್ರಿ ಪೊಲೀಸರು ಗ್ರಾಮದಲ್ಲಿರುವ ಮನೆ ಮೇಲೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದರು. ಮನೆಯ ಐದು ಕೋಣೆಗಳಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ 10 ಜನರನ್ನು ಬಂಧಿಸಿದ್ದಾರೆ. ಇತ್ತ ದಾಳಿ ಬಳಿಕ ಸೆಕ್ಸ್ ದಂಧೆಯ ಸಂಚಾಲಕಿ ಸರೋಜಿನಿ ಗೌತಮ್ ಸ್ಥಳದಿಂದ ಜೂಟ್ ಆಗಿದ್ದಾಳೆ
ಬಂಧಿತ ಐವರು ಯುವತಿಯರಲ್ಲಿ ಇಬ್ಬರು ಕೋಲ್ಕತ್ತಾ ಮೂಲದವರು ಎಂದು ಹೇಳಿದ್ದಾರೆ. ಇನ್ನುಳಿದ ಮೂವರು ಸರೋಜಿನಿಯ ಸಂಬಂಧಿಗಳು ಎಂದು ವಿಚಾರಣೆ ವೇಳೆ ಹೇಳಿಕೆ ದಾಖಲಿಸಿದ್ದಾರೆ. ಬಂಧಿತ ಐವರು ಯುವಕರು ಸೆಕ್ಸ್ ಅಡ್ಡಾಗೆ ಬಂದ ಗ್ರಾಹಕರು ಎಂದು ವರದಿಯಾಗಿದೆ.
Laxmi News 24×7